ಉಡುಪಿ: ಕನ್ನರ್ಪಾಡಿಯ ಅಮ್ಮ ಲೇ ಔಟ್ ಬಳಿ ವಿದ್ಯುತ್ ಶಾಕ್ ತಗುಲಿ ಹಸುವೊಂದು ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಹಸುವೊಂದು ವಿದ್ಯುತ್ ಶಾಕ್ ತಗುಲಿ ಅಸುನೀಗಿದ ಸುದ್ದಿ ತಿಳಿದ ತಕ್ಷಣ ಸಮಾಜ ಸೇವಕ, ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಕೆ ಕೃಷ್ಣಮೂರ್ತಿ ಆಚಾರ್ಯರವರು ಸ್ಥಳಕ್ಕೆ ಧಾವಿಸಿ ಹಸುವನ್ನು ದಫನ ಕಾರ್ಯ ಮಾಡುವಲ್ಲಿ ಸಹಕರಿಸಿದರು . ಈ ಸಂದರ್ಭದಲ್ಲಿ ಜಯಕರ ಶೇರಿಗಾರ್, ಚರಣ್ ರಾಜ್ ಬಂಗೇರ, ಸುನೀಲ್ ಬೈಲಕೆರೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.