ಕಾರ್ಕಳ: ನಗರ ಠಾಣೆಯ ಪೊಲೀಸ್ ಸಿಬಂದಿಯೊಬ್ಬರು ಇಲ್ಲಿನ ಮಿಯ್ಯಾರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿದೆ.
ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹೆಚ್ ಸಿ. 2190 ಪ್ರಶಾಂತ ಕೆ ಎನ್ ರವರು 1997 ನೇ ಸಾಲಿನಲ್ಲಿ ಪೊಲೀಸ್ ಇಲಾಖೆದಗೆ ಸೇರ್ಪಡೆಗೊಂಡವರು ಕಾರ್ಕಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದವರು ಸುಮಾರು 15 ವರ್ಷಗಳಿಂದ ಸಕ್ಕರೆ ಖಾಯಿಲೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ . ದಿನಾಂಕ. 15/07/2023 ರಂದು ರಾತ್ರಿ ಮನೆಯಲ್ಕಿ ಊಟ ಮಾಡಿಕೊಂಡ ಬಳಿಕ ಮಲಗಿದ್ದವರು ರಾತ್ರಿ 10 ಗಂಟೆಯಿಂದ ದಿನಾಂಕ 16/07/2023 ಬೆಳಿಗ್ಗೆ 05:15 ಗಂಟೆಯ ಮದ್ಯಾವದಿಯಲ್ಲಿ ಶುಗರ್ ಕಾಯಿಲೆ ಬಗ್ಗೆ ಮನನೊಂದು ಮನೆಯ ಹಿಂಬದಿ ತಗಡು ಶೀಟ್ ಮಾಡಿಗೆ ನೈಲಾನ್ ಹಗ್ಗ ಕಟ್ಡಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಮೃತರಿಗೆ ಸುಮಾರು 49 ವರ್ಷ ವಯಸ್ಸಾಗಿದ್ದು. ಅವಿವಾಹಿತ ರಾಗಿರುತ್ತಾರೆ. ಒಬ್ಬರು ಅಕ್ಕ ಮತ್ತು ಮೂವರು ತಂಗಿ ಹಾಗೂ ತಾಯಿ ಜೊತೆ ಇದ್ದು ಅಕ್ಕ ಹಾಗೂ ತಂಗಿಯಂದಿರಿಗೆ ಮದುವೆ ಆಗಿರುತ್ತದೆ
ಹಲವು ದಿನಗಳಿಂದ ರಜೆ ನಿಮಿತ್ತ ಮನೆಯಲ್ಲಿದ್ದ ಅವರು ಮನೆಯ ಹಿಂಭಾಗದಲ್ಲಿ ನೇಣು ಬಿಗಿದುಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.