ಕಾರ್ಕಳ : ಮಹಿಳೆಯೋರ್ವರು ತಾವು ಕಾರ್ಯ ನಿರ್ವಹಿಸುವ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಕಾರ್ಕಳ ಮಾರ್ಕೆಟ್ ರೋಡ್‌ನಲ್ಲಿ ಸಂಭವಿಸಿದೆ.
ಪ್ರಮೀಳಾ (30) ಎಂಬುವವರೆ ನೇಣಿಗೆ ಶರಣಾದ ಮಹಿಳೆ , ಖಾಸಗಿ ಸೊಸೈಟಿಯೊಂದರಲ್ಲಿ ಘಟನೆ ನಡೆದಿದ್ದು, ಬೆಳಗ್ಗೆ ಕಚೇರಿಗೆ ಬಂದವರೇ ಫ್ಯಾನ್‌ಗೆ ಶಾಲು ಮೂಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಾರ್ಕಳ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.