ಬೈಂದೂರು ತಾಲೂಕು ಮರವಂತೆ ಶ್ರೀ ಮಹಾರಾಜ ವರಹ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿ ಕರ್ಕಾಟಕ ಮಾಸದಲ್ಲಿ ಜರುಗುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಬಹಳ ವಿಶೇಷ.
ಕರ್ಕಾಟಕ ಮಾಸದಲ್ಲಿ ಬರುವ ಅಮಾವಾಸ್ಯೆ ಅಧಿಕಮಾಸವಾಗಿರುವುದರಿಂದ ಈ ವಾರ್ಷಿಕ ಹಬ್ಬ ಕೆಲವು ಕ್ಯಾಲೆಂಡರ್ ಮತ್ತು ಪಂಚಾಂಗಗಳಲ್ಲಿ ಜು-17ಕ್ಕೆ ಕರ್ಕಾಟಕಅಮಾವಾಸ್ಯೆಯೆಂದು ತಪ್ಪಾಗಿ ಮುದ್ರಿತಗೊಂಡಿದ್ದರಿಂದ ಈ ವರ್ಷದ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಆಗಸ್ಟ್ 16ರಂದು ನಡೆಯಲಿದೆ ಭಕ್ತರು ಗೊಂದಲ ಮಾಡಿಕೊಳ್ಳದೆ ಸಹಕರಿಸಬೇಕು ಎನ್ನುವುದಾಗಿ ಮರವಂತೆ ಶ್ರೀ ವರಾಹ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.