ಉಡುಪಿ :ಕೋಟೇಶ್ವರ ಶ್ರೀ ಭುವನೇಂದ್ರ ತೀರ್ಥ ಚಾರಿಟೆಬಲ್ ಟ್ರಸ್ಟ್ ಪ್ರವರ್ತಿತ ಶ್ರೀ ಯಾದವೇಂದ್ರ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಕಟಪಾಡಿ, ಶ್ರೀ ವೆಂಕಟರಮಣ ಯುವಕ ಸೇವಾ ಸಮಾಜ, ಎಸ್. ವಿ. ಎಸ್. ಚಾರಿಟೆಬಲ್ ಟ್ರಸ್ಟ್ ಕಟಪಾಡಿ ಸಂಯುಕ್ತ ಆಶ್ರಯದಲ್ಲಿ ಜುಲೈ 16ರ ಭಾನುವಾರ ಬೆಳಿಗ್ಗೆ 9. 30 ರಿಂದ ಮಧ್ಯಾಹ್ನ 1. 30 ರವರೆಗೆ 49ನೇ ಉಚಿತ ಆಯುರ್ವೇದ ತಪಾಸಣಾ ಶಿಬಿರ ನಡೆಯಲಿದೆ
ಕಟಪಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಎ. ಆರ್ ಕಾಮತ್ ಮೆಮೋರಿಯಲ್ ಸಭಾಗ್ರಹದಲ್ಲಿ ಶಿಬಿರ ನಡೆಯಲಿದ್ದು ಶಿಬಿರದಲ್ಲಿ ಆಯುರ್ವೇದ ತಜ್ಞ ವೈದ್ಯರುಗಳು ಭಾಗವಹಿಸಲಿದ್ದು, ಆರೋಗ್ಯ ತಪಾಸಣೆ ಮತ್ತು ಆಯುರ್ವೇದ ಔಷಧಗಳನ್ನು ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು ಆರೋಗ್ಯ ಸೇವಾ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.