ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಇಳಿಮುಖವಾಗಿದ್ದರೂ ಕೆಲವೆಡೆ ಕಡಲೊರೆತ ಸಮಸ್ಯೆ ಕಡಿಮೆಯಾಗಿಲ್ಲ. ಬ್ರಹ್ಮಾವರದ ಕೋಡಿ ಹೊಸಬೆಂಗ್ರೆ ಪ್ರದೇಶದಲ್ಲಿ ಕಡಲೊರೆತದ ಪರಿಣಾಮ ಸಮುದ್ರದ ಪಕ್ಕದಲ್ಲಿ ಸಂಪರ್ಕಕ್ಕಾಗಿ ನಿರ್ಮಿಸಲಾಗಿದ್ದ ಕಚ್ಚಾ ರಸ್ತೆ ಮತ್ತು ಸಮುದ್ರ ತೀರದಲ್ಲಿ ಹಾಕಲಾಗಿದ್ದ ತಡೆಗೋಡೆ ಸಮುದ್ರ ಪಾಲಾಗಿದೆ.
ಸದ್ಯ 500 ಮೀಟರ್‌ನಷ್ಟು ಉದ್ದದ ತಾತ್ಕಾಲಿಕ ತಡೆಗೋಡೆ ಕಾಮಗಾರಿ ಆರಂಭಗೊಂಡಿದ್ದು, ಕಳೆದ ಮೂರು ದಿನಗಳಿಂದ ತಡೆಗೋಡೆ ಕಾಮಗಾರಿ ಕಾರ್ಯ ಭರದಿಂದ ನಡೆಯುತ್ತಿದೆ.