ಉಡುಪಿ: ಉಡುಪಿಯ ಚಿತ್ತರಂಜನ್ ಸರ್ಕಲ್ ನಲ್ಲಿ ವಿನೂತನ ರೀತಿಯಲ್ಲಿ ಉಚಿತ ಮದ್ಯ ನೀಡುವಂತೆ ಸರಕಾರಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು
ಸರಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸುವ ಮೂಲಕ ಉಚಿತ ಮದ್ಯ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದ ಮದ್ಯಪ್ರಿಯರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಕುಡುಕರಿಗೆ ಹಾರ ಹಾಕಿ , ಆರತಿ ಎತ್ತಿ , ಡೋಲು ಬಡಿದು ಗಮನ ಸೆಳೆದರು.
ಉಚಿತ ಗ್ಯಾರಂಟಿ ಯೋಜನೆಗಳನ್ನು ಹಂತಹಂತವಾಗಿ ಜಾರಿ ಮಾಡುತ್ತಿದೆ.
ಸರಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುವುದು ಇತ್ತೀಚಿನ ಬಜೆಟ್ ನಲ್ಲಿ ಮದ್ಯದ ಬೆಲೆ ೨೦ ಶೆಕಡಾ ಏರಿಕೆ ಮಾಡಿದೆ,ನಮಗೆ ಮದ್ಯದ ಬೆಲೆ ಇಳಿಕೆ ಮಾಡಿ ಮದ್ಯವನ್ನು ಉಚಿತವಾಗಿ ನೀಡುವಂತೆ ಮದ್ಯಪ್ರಿಯರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಮನವಿ ಮಾಡಿದರು.ಆ ಹಣವನ್ನು ನಾವು ನಮ್ಮ ಹೆಂಡತಿ, ಮಕ್ಕಳಿಗೆ ನಿಡುತ್ತೇವೆ ನಮ್ಮ ಹೆಂಡತಿ, ಮಕ್ಕಳನ್ನು ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೆವೆ ಎಂದರು
ನಾಗರಿಕ ಸಮಿತಿ ನಿತ್ಯಾನಂದ ಒಳಕಾಡು, ಗೋವಿಂದ ಶೆಟ್ಟಿ ಮಾತನಾಡಿ, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ನೀಡುವಂತೆ ಒತ್ತಾಯಿಸಿದರು ಇಲ್ಲದಿದ್ದಲ್ಲಿ ಸಾರಾಯಿ ಯನ್ನು ಬಂದ್ ಮಾಡುವಂತೆ ಅಗ್ರಹಿಸಿದರು,
ಮದ್ಯಪ್ರಿಯರ ಸುಂಕ ಸರಕಾರಕ್ಕೆ ಹೆಚ್ಚು ಆರ್ಥಿಕ ಬಲ ನೀಡುವುದು ,ಮದ್ಯಕ್ಕೂ ಉಚಿತ ಯೋಜನೆ ಜಾರಿಯಾಗಬೇಕು ಎಂದರು.
ಇಷ್ಟೆಲ್ಲಾ ಮದ್ಯದಿಂದ ಸರಕಾರಕ್ಕೆ ಲಾಭವಿದ್ದರು, ಬೆಲೆ ಏರಿಕೆ ಮಾಡಿ ಸರಕಾರ ಮದ್ಯಪ್ರಿಯರಿಗೆ ಅನ್ಯಾಯ ಮಾಡಿದೆ. ಒಂದೋ ಮದ್ಯ ಉಚಿತ ನೀಡಿ, ಇಲ್ಲವೇ ಮದ್ಯ ಬಂದ್ ಮಾಡಿ ಎಂದು ಮದ್ಯಪ್ರಿಯರು ಸರಕಾರವನ್ನು ಒತ್ತಾಯಿಸಿದರು.