ಉಡುಪಿ : ಉದ್ಯಾವರ ಬೋಳಾರುಗುಡ್ಡೆ ನಿವಾಸಿ, ಆಟೋರಿಕ್ಷಾ ಚಾಲಕ ಚಂದ್ರೇಶ್ (52) ಅಸೌಖ್ಯದಿಂದ ಮನನೊಂದು ಮನೆಯ ಪಕ್ಕಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಾವರ ಗ್ರಾಮ ಪಂಚಾಯತ್ ಕಚೇರಿ ಬಳಿಯ ದಿ. ಶೇಖರ ಮತ್ತು ದಿ. ಜಾನಕಿ ದಂಪತಿಗಳ ಪುತ್ರನಾಗಿರುವ ಚಂದ್ರೇಶ್ (ಚಂದ್ರು) ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿದ್ದು, ಉದ್ಯಾವರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಕಳೆದ ಕೆಲವು ಸಮಯಗಳಿಂದ ಸಕ್ಕರೆ ಕಾಯಿಲೆಗೆ ಒಳಪಟ್ಟಿದ್ದ ಇವರು, ಇದಕ್ಕಾಗಿ ಮನನೊಂದಿದ್ದರು. ನಿನ್ನೆ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಬೇಕಾಗಿದ್ದ ಇವರು, ಮನೆಯ ಹೊರ ಭಾಗದಲ್ಲಿ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.