ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಉಡುಪಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ಬ್ರಹ್ಮಾವರ ತಾಲೂಕು ಸಮಿತಿ ವತಿಯಿಂದ ನಿನ್ನೆ ಮಧ್ಯಾಹ್ನ ಸಿಡಿಪಿಒ ಕಛೇರಿ ಮುಂದೆ ಪ್ರತಿಭಟನೆ ನಡೆಯಿತು.
ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನೀಡಬೇಕು, ಪಿಎಫ್ ಗ್ರಾಚುವಿಟಿ ನೀಡಬೇಕು, ತಮ್ಮ ನೌಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು, ಇತ್ಯಾದಿ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಈ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಬಳಿಕ ಸಿಡಿಪಿಒ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಯಲಕ್ಷ್ಮಿ, ಸರೋಜ,ಸರೋಜಿನಿ, ಸುಶೀಲಾ ನಾಡ,ಯಶೋಧ.ಕೆ,ಭಾರತಿ,ಆಶಾ, ಸಿಐಟಿಯು ಜಿಲ್ಲಾ ಖಂಜಾಚಿ ಶಶಿಧರ ಗೋಲ್ಲ,ಮುಖಂಡರಾದ ಮುರಳಿ,ರಮೇಶ್ ಉಪಸ್ಥಿತರಿದ್ದರು.