ಉಡುಪಿ: ಸಂತೆಕಟ್ಟೆ ಬಳಿ ಓವರ್ ಪಾಸ್ ಕಾಮಗಾರಿಯ ಬೃಹತ್ ಹೊಂಡದ ಒಂದು ಭಾಗ ಕುಸಿದಿದ್ದು, ಸ್ಥಳೀಯರಲ್ಲಿ ಆತಂಕ ಕಾರಣವಾಗಿದೆ.
ಓವರ್ ಪಾಸ್ ಕಾಮಗಾರಿ ಮಳೆಗಾಲಕ್ಕೂ ಮೊದಲು ಪ್ರಾರಂಭಿಸಲಾಗಿತ್ತು. ಅದಕ್ಕಾಗಿ ಬೃಹತ್ ಹೊಂಡ ತೋಡಲಾಗಿತ್ತು.ಹೊಂಡದಲ್ಲಿ ಭಾರೀ ಪ್ರಮಾಣದ ಬಂಡೆ ಕಲ್ಲು ಕಂಡುಬಂದ ಕಾರಣ ನಿದಾನಗತಿಯಲ್ಲಿ ಕಾಮಗಾರಿ ಸಾಗ್ತಾ ಇತ್ತು . ಬಳಿಕ ಮಳೆಗೆ ಟಾರ್ಪಲ್ ಅಳವಡಿಕೆ ಮಾಡಲಾಗಿತ್ತು. ಆದರೆ ಇಂದು ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ