ಉಡುಪಿ : ಉಡುಪಿ ಮೂಲದ ಹಿರಿಯ ವ್ಯಕ್ತಿಯೊಬ್ಬರು ತನ್ನ ಮೂಲ ಮನೆಗೆ ಮುಂಬೈನಿಂದ ಬಂದು ಸಂಬಂಧಿಕರು ಯಾರು ಸಿಗದೆ ಆರು ದಿನಗಳ ಕಾಲ ಸರಿಯಾದ ಅನ್ನ ಆಹಾರ ಇಲ್ಲದೆ ಉಡುಪಿ ಕಲ್ಸಂಕದ ಬಳಿ ದುಃಖಿತರಾಗಿದ್ದು ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕರಾದ ರೋಶನ್ ಕೆ ಅಮೀನ್ ಮತ್ತು ಪ್ರಕಾಶ ನಾಯ್ಕ್ ಸಹಾಯದಿಂದ ರಕ್ಷಿಸಿ ಬ್ರಹ್ಮಾವರದ ಅಪ್ಪ ಅಮ್ಮ ಆಶ್ರಮ ದಾಖಲಿಸಿದ್ದಾರೆ.
ವೃದ್ಧರು ತನ್ನ ಹೆಸರು ದೀನನಾಥ ಮೊಗವೀರ(70ವರ್ಷ), ಉದ್ಯಾವರ ಸಂಪಿಗೆ ನಗರ ನಿವಾಸಿ, ಪರದೇಶ ಹಾಗೂ ಮುಂಬೈನಲ್ಲಿ ಟೈಲರ್ ವೃತ್ತಿ ನಡೆಸಿ ಕುಟುಂಬಸ್ತರಿಗೆ ನೆರವಾಗಿದ್ದೆ, ಇದೀಗ ತನ್ನವರು ಯಾರೂ ತನ್ನ ವೃದ್ದಾಪ್ಯದಲ್ಲಿ ನೆರವಾಗದೆ, ಅಸಹಾಯಕನಾಗಿ ಊರಿಗೆ ಬಂದೆ. ಊರಿನಲ್ಲಿಯೂ ಯಾರೂ ನೆರವಿಗೆ ಸಿಗಲಿಲ್ಲ. ಉಪವಾಸ ಬಿದ್ದು ಬೀದಿಪಾಲಾದೆ ಎಂದು ತಿಳಿಸಿದ್ದಾರೆ. ಸಂಬಂಧಪಟ್ಟವರು ಕೂಡಲೇ ಹಿರಿಯ ನಾಗರಿಕ ಸಹಾಯವಾಣಿ ದೂರವಾಣಿ ಸಂಖ್ಯೆ 0820-2526394 ಅನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.