ಕಾರ್ಕಳ : ಕಾಲು ಜಾರಿ ಮಹಿಳೆಯೋರ್ವರು ಹೊಳೆಗೆ ಬಿದ್ದು ಸಾವಿಗೀಡಾದ ಘಟನೆ ನಲ್ಲೂರಿನಲ್ಲಿ ಜು. 7ರ ಸಂಜೆ ಈ ಘಟನೆ ಸಂಭವಿಸಿದೆ.
ನಲ್ಲೂರು ಗ್ರಾಮದ ನಡಯಿಪ ಜಗನ್ನಾಥ ಶೆಟ್ಟಿ ಅವರ ಪತ್ನಿ ಬೇಬಿ ಶೆಟ್ಟಿ (55) ಎಂಬವರೇ ಸಾವಿಗೀಡಾದ ದುರ್ದೈವಿ.
ಮೇಯಲು ಬಿಟ್ಟ ದನ ಕರೆತರಲೆಂದು ಕೇರನದಿ ಬಳಿ ತೆರಳಿದಾಗ ಈ ದುರ್ಘಟನೆ ನಡೆದಿದ್ದು ಬೇಬಿ ಅವರು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿ ಮೃತ ಪಟ್ಟಿರುತ್ತಾರೆ.
ಇವರು ಪತಿ ಜಗನ್ನಾಥ ಶೆಟ್ಟಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.