ಕಾರ್ಕಳ : ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇದರ ಪರಿಸರ ಸಂಘ ಇವು ಗಳ ಜಂಟಿ ಆಶ್ರಯದಲ್ಲಿ “ಒಂದು ದಿನದ ವಿಶೇಷ ಶಿಬಿರ ಹಾಗೂ ವನಮಹೋತ್ಸವ” ಕಾರ್ಯಕ್ರಮವನ್ನು ದಿನಾಂಕ 06-07-2023ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು, ಸಾಣೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಕಳ ಅರಣ್ಯ ವಲಯ ಅಧಿಕಾರಿಗಳಾದ ಶ್ರೀ ಪ್ರಭಾಕರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಿಡ ನೆಟ್ಟು ವನಮಹೋತ್ಸವದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಚೇತ, ಕಾಲೇಜಿನ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಸದಸ್ಯರು ಹಾಗೂ ಶಿಕ್ಷಣ ತಜ್ಞರಾದ ಶ್ರೀ ಡಾ. ಮೋಹನ ದಾಸ ಪ್ರಭು ಜಿ., ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಅರವಿಂದ ಕೆ. ಎನ್., ಆಂಗ್ಲ ಭಾಷಾ ಉಪನ್ಯಾಸಕರಾದ ಡಾ. ಸುಮತಿ ಪಿ. ಹಾಗೂ ಕಚೇರಿ ಸಹಾಯಕರಾದ ಶ್ರೀಮತಿ ಜಯಂತಿ ಇವರು ಗಿಡ ನೆಟ್ಟು ವನಮಹೋತ್ಸವವನ್ನು ಆಚರಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 38 ಸ್ವಯಂಸೇವಕರು ಹಾಗೂ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ಸೌಮ್ಯ ಎಚ್ ಕೆ ಕಾಲೇಜಿನ ಆವರಣದಲ್ಲಿ 100 ಗಿಡಗಳನ್ನು ನೆಟ್ಟು ವನಮೋತ್ಸವವನ್ನು ಆಚರಿಸಲಾಯಿತು