ಕಳೆದು ಹೋದ ಪಾಸ್‌ಪೋರ್ಟ್ ಮರುವಿತರಣೆಗೆ ಎಫ್‌ಐಆ ಪ್ರತಿ ಕಡ್ಡಾಯವಾಗಿದೆ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ, ಈ ಆದೇಶ ಹೊರಡಿಸಿದೆ
ಅರ್ಜಿದಾರರ ಪ್ರಕರಣವು ಹೊಸ ಪಾಸ್ಪೋರ್ಟ್ ವಿತರಣೆಗೆ ಸಂಬಂಧಿಸಿದ್ದಲ್ಲ. ಬದಲಿಗೆ, ಪಾಸ್ ಪೋರ್ಟ್ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮರು ವಿತರಣೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಸಂಬಂಧಪಟ್ಟಂತೆ ಎರಡು ಕಡೆಗಳ ವಾದ ವಿವಾದ ಆಲಿಸಿದ ನ್ಯಾಯಪೀಠ ಕಳೆದು ಹೋದ ಪಾಸ್‌ಪೋರ್ಟ್ ಮರುವಿತರಣೆ ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಪಾಸ್‌ಪೋರ್ಟ್ ನಿಯಮಗಳ ಅನುಸಾರ ಪೊಲೀಸರ ಪ್ರಥಮ ವರ್ತಮಾನ ವರದಿ (ಎಫ್ ಐಆರ್) ಪ್ರತಿ ಲಗತ್ತಿಸುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ