ಕಾರ್ಕಳ: ಕಳೆದ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸ್ವರ್ಣ ನದಿ ಉಕ್ಕಿ ಹರಿಯುತ್ತಾ ಹಿರಿಯಡ್ಕದ ಬಜೆ ಅ ಣೆಕಟ್ಟಿಗೆ ಸೇರುತ್ತಿದೆ. ಪಶ್ಚಿಮಘಟ್ಟದ ತಪ್ಪಲು ತೀರಪ್ರದೇಶವಾಗಿರುವ ಮಾಳ ಮಲ್ಲಾರು ವಿನಲ್ಲಿ ಉಗಮಿಸುವ ಸ್ವರ್ಣ ನದಿಯ ಮಳೆಯಿಂದಾಗಿ ಒಳಹರಿವು ಹೆಚ್ಚಿದೆ. ಪ್ರಸಕ್ತ ವರ್ಷ ಅವಧಿಯಲ್ಲಿ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ಬಲ್ಮ ಗುಂಡಿಯಲ್ಲಿ ನಿರ್ಮಾಣಗೊಂಡ ಎಲ್ಲಾ ಬಾಗಿಲುಗಳು ತೆರೆದುಕೊಂಡು ಇದರಿಂದ ಈ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಲಿಲ್ಲ ಸ್ವರ್ಣ ನದಿಯ ಒಳಹರಿವಿನ ರಬ್ಬಸಕ್ಕೆ ಐದು ಗ್ರಾಮ ಗಳಿಗೆ ಸಂಪರ್ಕಿಸುವ ಏಕೈಕ ಶಿಥಿಲ ಸೇತುವೆ ಯಲ್ಲಿ ಕಂಪನ ಉಂಟಾಗುತ್ತದೆ.