ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ನಿರ್ವಹಣೆಗೊಂಡ ರೋಟರಿ ಗ್ರಾಂಟ್ ಯೋಜನೆ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕವನ್ನು ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಈಚೆಗೆ ಉಧ್ಘಾಟಿಸಿ ಲೋಕಾರ್ಪಣೆ ಗೊಳಿಸಲಾಯಿತು.
ಆಸ್ಪತ್ರೆಯಲ್ಲಿ ಘಟಕವನ್ನು ಲೋಕಾರ್ಪಣೆಗೊಳಿಸಿದ ಬಳಿಕ ನಗರದ ಹೋಟೆಲ್ ಪ್ರಕಾಶ್ ನ ಉತ್ಸವ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಧ್ಘಾಟಕರಾದ ಅಂತರಾಷ್ಟ್ರೀಯ ರೋಟರಿಯ ಪೂರ್ವ ನಿರ್ದೇಶಕರಾದ ಡಾ. ಭರತ್ ಪಾಂಡ್ಯ ಕಾರ್ಕಳದಂತಹ ಪಟ್ಟಣಕ್ಕೆ ಅತ್ಯಾವಶ್ಯಕವಾಗಿದ್ದ ತುರ್ತು ಚಿಕಿತ್ಸಾ ಘಟಕದ ಯೋಜನೆಯನ್ನು ಸಾಕಾರಗೊಳೊಸುವಲ್ಲಿಕೈ ಜೋಡಿಸಿದ ಎಲ್ಲ ರೋಟರಿ ಕ್ಲಬ್ ಗಳ ಮತ್ತು ತಕ್ಷಣ ಸ್ಪಂದಿಸಿದ ದಾನಿಗಳನ್ನು ಕೊಂಡಾಡಿದರು.
ಕೇವಲಐದು ವರ್ಷದ ಕಿರಿಯ ಕ್ಲಬ್ ಗ್ಲೋಬಲ್ ಗ್ರಾಂಟ್ ಯೋಜನೆ ನಿರ್ವಹಿಸಿ ಅಸಾಮಾನ್ಯ ಸಾಧನೆಗೈದ ರಾಕ್ ಸಿಟಿ ರೋಟರಿಗೆ ಹಾಗೂ ರೋಟರಿ ಆಸ್ಪತ್ರೆಗೆ ವಿಶೇಷ ಅಭಿನಂದನೆ ಸಲ್ಲಿಸಿದರು.ಮಾತ್ರವಲ್ಲದೆ ಯೋಜನೆಗೆ ದೊಡ್ಡ ಮಟ್ಟದ ಧನಸಹಾಯ ಒದಗಿಸಿದ ಮೋಹನ್ ಶೆಣೈ ದಂಪತಿಗಳು, ಜಗನ್ನಾಥ ಪೈ ಜ್ಯೋತಿ ಪೈ ದಂಪತಿಗಳು ಹಾಗೂ ಯೋಗೀಶ್ ಪೈ ದಂಪತಿಗಳನ್ನು ಸರ್ವ ರೀತಿಯ ಶ್ಲಾಘನೆ ಅಭಿನಂದನೆಗಳೊಂದಿಗೆ ಸಮ್ಮಾನಿಸಿದರು. ಪ್ರಧಾನ ಅತಿಥಿಗಳಲ್ಲಿ ಒಬ್ಬರಾಗಿದ್ದ ಮಣಿಪಾಲದ ಮಾಹೆಯ ಪ್ರೊ.ಚಾನ್ಸಲರ್ ಡಾ. ಹೆಚ್.ಎಸ್.ಬಲ್ಲಾಳ್ ರೋಟರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಲು ಮನಮಾಡಿದ ಸರ್ವರನ್ನೂ ಅಭಿನಂದಿಸಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವ ಭರವಸೆ ನೀಡಿದರು.
ರೋಟರಿ ಜಿಲ್ಲೆ 3182 ಗವರ್ನರ್ ಡಾ.ಜಯಗೌರಿ ಹಾದಿಗಲ್ ಉಪಸ್ಥಿತರಿದ್ದು ಕಾರ್ಕಳದ ಉಭಯ ರೋಟರಿ ಕ್ಲಬ್ ಗಳ ಸೇವಾ ಕೈಂಕರ್ಯವನ್ನು ವಿಶೇಷವಾಗಿ ಕೊಂಡಾಡಿ ಹರಸಿದರಲ್ಲದೆ ಇತರ ರೋಟರಿಯೇತರ ದಾನಿಗಳನ್ನು ಮತ್ತು ಎರಡೂ ರೋಟರಿ ಕ್ಲಬ್ ಗಳ ಯೋಜನೆ ಮಂಜೂರಾದ ವರ್ಷದ ಅಧ್ಯಕ್ಷರು ಹಾಗೂ ಟಿಆರ್ ಎಫ್ ಅಧ್ಯಕ್ಷರುಗಳನ್ನು ಅಭಿನಂದಿಸಿದರು. ಮಾಜಿ ಗವರ್ನರ್ ಡಾ.ಪಿ.ನಾರಾಯಣ್ ಉಪಸ್ಥಿತರಿದ್ದು ಕಾರ್ಕಳದ ರೋಟರಿ ಕ್ಲಬ್ ಗಳು, ರೋಟರಿ ಆಸ್ಪತ್ರೆ ಹಾಗೂ ದಾನಿಗಳಿಗೆ ಕೃತಜ್ಞತೆಯ ಭಾವನೆ ವ್ಯಕ್ತಪಡಿಸಿದರು.ಇನ್ನೋರ್ವ ಅಮೇರಿಕಾದ ರೋಟರಿ ಕ್ಲಬ್ ನ ಸದಸ್ಯ, ಯೋಜನೆಗೆ ವೈಯಕ್ತಿಕವಾಗಿ ದೊಡ್ಡ ಮೊತ್ತದ ದೇಣಿಗೆ ನೀಡಿದ. ರೊಟೇರಿಯನ್ ವಸಂತ ಪ್ರಭು ಇವರನ್ನು ಸಮ್ಮಾನಿಸಲಾಯಿತು.
ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್ ಸ್ಥಾಪನೆಯಾದ ದಿನದಿಂದಲೂ ರೋಟರಿಯಿಂದ ಆಸ್ಪತ್ರೆಗೆ ಲಭ್ಯವಾದ ಕೊಡುಗೆಗಳನ್ನು ಸ್ಮರಿಸಿಕೊಂಡರು ಹಾಗೂ ಹೊಸ ಕೊಡುಗೆಗಾಗಿ ಅಬಿನಂದನೆ ಹಾಗೂ ಅಭಿವಂದನೆಯ ನುಡಿಗಳನ್ನಾಡಿದರು.
ಸಂಜನಾ ಜೈನ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಾಕ್ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಚಿರಾಗ್ ರಾವ್ ಸ್ವಾಗತಿಸಿದರು.ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯೋಜನೆ ಅನುಷ್ಠಾನಕ್ಕಾಗಿ ಬಹುವಾಗಿ ಶ್ರಮಿಸಿದ ಕ್ಲಬ್ ನ ಮಾಜಿ ಅಧ್ಯಕ್ಷ ರೊ.ಸುರೇಂದ್ರ ನಾಯಕ್ ಪ್ರಮುಖ ದಾನಿಗಳ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಪೈ ಇತರ ದಾನಿಗಳ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ. ಬಿಳಿರಾಯ ಹಾಗೂ ಗಣೇಶ್ ಬರ್ಲಾಯ ಅತಿಥಿಗಳ ಪರಿಚಯ ನೀಡಿದರು.ಯೋಜನೆ ಯ ಲೆಕ್ಕತಪಾಸಣೆಯನ್ನು ಉಚಿತವಾಗಿ ನಡೆಸಿದ ಸಿಎ ಪ್ರಭಾತ್ ರನ್ನು ಹಾಗೂ ಯೋಜನೆಯನ್ನು ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸುವಲ್ಲಿ ಶ್ರಮಿಸಿದ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಟೇಶ್ ರನ್ನು ಗುರುತಿಸಿ ಅಭಿನಂದಿಸಲಾಯಿತು.
23-24 ನೇ ಸಾಲಿನ ನಿಯೋಜಿತ ಅಧ್ಯಕ್ಷ ಸುರೇಶ್ ನಾಯಕ್ ಧನ್ಯವಾದ ಅರ್ಪಿಸಿದರೆ, ಶ್ರೀವರ್ಮಅಜ್ರಿ ಕಾರ್ಯಕ್ರಮ ನಿರೂಪಿಸಿದರು.