ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪದ್ಮನಾಭನಗರ-ಮುದ್ದಣ್ಣ ನಗರ ಸಂಪರ್ಕ ರಸ್ತೆಯ ಚರಂಡಿ ಮೋರಿ ಕುಸಿದಿರುವುದರಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಗ್ರಾಮ ಪಂಚಾಯತ್‌ನ ಗ್ರಾಮ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿದ್ದಾರೆ.
ಮಳೆ ಕಡಿಮೆ ಆಗುವವರೆಗೆ ಅನಗತ್ಯ ಸಂಚಾರ ಹಾಗೂ ನದಿ, ಕೆರೆ ಮತ್ತು ತೋಡಿನ ಬಳಿ ತೆರಳದಂತೆ ಮತ್ತು ರಸ್ತೆ ದುರಸ್ತಿಯಾಗುವವರೆಗೆ ಸಾರ್ವಜನಿಕರು ಸಹಕರಿಸಬೇಕಾಗಿ ಸಾಣೂರು ಗ್ರಾಮಸ್ಥರಲ್ಲಿ ವಿನಂತಿಸಲಾಗಿದೆ.