ಮುಂಡ್ಕೂರು ಸಮೃದ್ಧಿ ಸಂಜೀವಿನಿ ಒಕ್ಕೂಟದ ವತಿಯಿಂದ ಮುಂಡ್ಕೂರು ಜೈನಪೇಟೆಯ ಬಳಿ ಅಡಿಲು ಭೂಮಿ ಕೃಷಿಗೆ ಮೊದಲ ಹಂತದ ಕೆಲಸಕ್ಜೆ ಬುಧವಾರ ಚಾಲನೆ ನೀಡಿದರು. ಸುಮಾರು ಒಂದು ಎಕರೆ ಅಡಿಲು ಭೂಮಿಯನ್ನು ಸಮತಟ್ಟು ಮಾಡಿ ಟ್ಯಾಕ್ಟರ್ ಮೂಲಕ ಉಳುಮೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ವನಿತಾ ಶೆಟ್ಟಿ ಎಲ್ ಸಿ ಆರ್ ಪಿ ಶಶಿಕಲಾ, ಸುಮನ ಒಕ್ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಮತ್ತಿತರರು ಉಪಸ್ಥಿತರಿದ್ದರು