ಕಾರ್ಕಳ : ಗೋಪಾಲ ಭಂಡಾರಿ ಒಬ್ಬ ಉತ್ತಮ ಸಂಸದೀಯಪಟು. ವಿಧಾನ ಸಭೆಯಲ್ಲಿ ಅವರ ವಾದ ಸರಣಿ ಮತ್ತು ವಿಷಯ ಮಂಡನೆ ಜನಪರ ಕಾಳಜಿಯ ಸಾಂವಿಧಾನಿಕ ಬದ್ಧತೆಯಿಂದ ಕೂಡಿತ್ತು. ನಮ್ಮದು ಸುದೀರ್ಘಾವದಿಯ ಮಿತೃತ್ವ. ಅಂತವರ ಪುಣ್ಯ ತಿಥಿಯಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಪೆರ್ವಾಜೆ ಬಿಲ್ಲವ ಸೇವಾ ಸಂಘ(ರಿ)ದಲ್ಲಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಆಯೋಜಿಸಿದ ಮಾಜಿ ಶಾಸಕ ಗೋಪಾಲ ಭಂಡಾರಿಯವರ 4ನೇ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು. ಇದರ ಅಂಗವಾಗಿ ಬೃಹತ್ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮವು ಜರುಗಿತು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ , ಗೋಪಾಲಭಂಡಾರಿ ಸಮಗ್ರ ಕಾರ್ಕಳದ ಅಭಿವೃದ್ದಿಯ ಹರಿಕಾರ. ಹಿಂದುಳಿದ ವರ್ಗವೂ ಸೇರಿ ಸಮಸ್ತ ಸಂತೃಸ್ಥ ಸಮಾಜದ ಆಶಾಕಿರಣವಾಗಿದ್ದರು. ಮುಂದಿನ ನಾಯಕರಾಗುವವರು ಅವರು ಹಾಕಿ ಹೋದ ರಾಜಧರ್ಮದ ನಡೆಯನ್ನು ಅನುಸರಿಸ ಬೇಕಾದುದು ಇಂದಿನ ಆಧ್ಯತೆಯಾಗಿದೆ ಎಂದರು.
ಹಿರಿಯ ನ್ಯಾಯವಾದಿ ಶೇಖರ ಮಡಿವಾಳ ಪ್ರಸ್ತಾವನೆ ಗೈದು ಮಾತಾನಾಡಿ ಗೋಪಾಲ ಭಂಡಾರಿ ಸಾದನೆಯ ಇತಿಚಿತ್ರ-ಗತಿಚಿತ್ರ ಸಭೆಯ ಮುಂದಿಟ್ಟರು. ಭೂಸುಧಾರಣಾ ಕಾನೂನಿನ ಅನುಷ್ಠಾನದ ಸಂದರ್ಭದಲ್ಲಿ ಅವರ ಬದ್ದತೆ ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿತ್ತು ಎಂದರು. ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ನುಡಿನಮನ ಸಲ್ಲಿಸಿ ಪುಷ್ಪಾರ್ಚನೆಗೆ ಚಾಲನೆ ನೀಡಿ ಕ್ಷೇತ್ರದ ಜನರ ಬದುಕಿಗಾಗಿ ತನ್ನ ಬದುಕನ್ನು ಸವೆಸಿ ಪರಂಧಾಮನೈದ ಕಾಯಕಯೋಗಿ ಗೋಪಾಲ ಭಂಡಾರಿಯವರ ನೆನಪು ಚಿರಸ್ಥಾಯಿಯಾಗಿ ಉಳಿಯ ಬೇಕು. ಆ ನೆಲೆಯಲ್ಲಿ ಅವರ ಸ್ಮರಣಾರ್ಥ ಅವರು ಕಾರ್ಯಸಾಧನೆ ಮಾಡಿದ ಅವರ ಕರ್ಮಭೂಮಿ, ಅವರದ್ದೇ ಆದ ಅವರ ಹಳೆಯ ಕಛೇರಿಯ ಕಟ್ಟಡದಲ್ಲಿಯೇ ನಡೆಯ ಬೇಕು. ಅದಕ್ಕೆ ಅವರ ಕುಟುಂಬಸ್ಥರು ಮತ್ತು ಕಾಂಗ್ರೆಸ್ ನಾಯಕರು ಮನಸ್ಸು ಮಾಡಬೇಕು ಎಂದು ಹೇಳಿದರು.
ಹಿರಿಯ ಮುಖಂಡ ಡಿ.ಆರ್ ರಾಜು, ನೀರೆ ಕೃಷ್ಣ ಶೆಟ್ಟಿ, ಹಿರಿಯಂಗಡಿ ಸುರೇಂದ್ರ ಶೆಟ್ಟಿ, ನುಡಿನಮನ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಗೋಪಾಲಭಂಡಾರಿ ಅವರು ಮಿತವಾದ ಮಾತು ಸರ್ವರ ಪ್ರೀತಿ,ನಂಬಿಕೆ,ವಿಶ್ವಾಸಾರ್ಹಕ್ಕೆ ಪಾತ್ರರಾಗಿದ್ದರು. ಸಹಾಯ ಹಸ್ತ ಕೇಳಿಕೊಂಡು ಯಾರೇ ತಮ್ಮಕಛೇರಿಗೆ ಬಂದರೂ ಅವರ ಪೂರ್ವಪರವಾದ ನಿಲುವು, ಧೋರಣೆಯನ್ನು ಪ್ರಶ್ನಿಸದೇ ತನಗಾಗುವ ಸಹಾಯಹಸ್ತ ನೀಡುತ್ತಿದ್ದರು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಚ ಸದಾಶಿವ ದೇವಾಡಿಗ, ಕಿರಣ್ ಹೆಗ್ಡೆ, ಎನ್ ಆರ್ ಸುಭೀತ್ ಕುಮಾರ್, ಶಿರಿಯಣ್ಣ ಶೆಟ್ಟಿ, ಸುಧಾಕರ ಕೋಟ್ಯಾನ್,ಸುಶಾಂತ್, ಕುಶಮೂಲ್ಯ, ಮಾಲಿನಿ ರೈ, ಪ್ರತಿಮಾ ರಾಣೆ, ಅನಿತಾ ಬೆಳ್ಮಣ್, ನವೀನ್ ದೇವಾಡಿಗ, ಸೀತಾರಾಮ, ಪ್ರಭಾಕರ ಬಂಗೇರಾ ಮೊದಲಾದವರು ಸಭೆಯಲ್ಲಿಯಲ್ಲಿ ಉಪಸ್ಥಿತರಿದ್ದರು.
ಮಾಜಿಶಾಸಕ ಹೆಚ್.ಗೋಪಾಲಭಂಡಾರಿ ಅವರ ಸಹೋದರ,ಪುತ್ರಿ,ಅಳಿಯ ಹಾಗೂ ಮನೆ ಮಂದಿ ಸಭೆಯಲ್ಲಿದ್ದು, ನುಡಿನಮನ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಭದರಾವ್ ಸ್ವಾಗತಿಸಿ, ನಿರೂಪಿಸಿದರು