ಮಣಿಪಾಲ : ಉಡುಪಿ ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿತ್ತಿರುವ ಧಾರಾಕಾರ ಮಳೆಯಿಂದಾಗಿ ಉಡುಪಿ ಮಣಿಪಾಲ ರಸ್ತೆ ಬದಿಯ ಏರು ಪ್ರದೇಶದಲ್ಲಿದ್ದ ಗುಡ್ಡ ಜರಿತಗೊಂಡು ಮಣ್ಣು ರಸ್ತೆಗೆ ಕುಸಿದಿದೆ.
ಸದ್ಯ ಉಡುಪಿಯಲ್ಲಿ ವ್ಯಾಪಕ ಮಳೆಯಿಂದಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ನಿರಂತರ ಮಳೆಯಿಂದ ಮಣ್ಣು ಹದಗೊಂಡು ಗುಡ್ಡ ಜರಿಯುತ್ತಿದೆ.
ಜರಿಯುತ್ತಿರುವ ಗುಡ್ಡದ ಮೇಲೆ ಕಟ್ಟಡಗಳು ಇರುವುದರಿಂದ ಆತಂಕ ಹೆಚ್ಚಾಗಿದ್ದು ಸದ್ಯ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.