ಮಂಗಳೂರು: ಮಕ್ಕಳು ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ನಡೆದರೆ ಹೆತ್ತವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಪದವಿನಂಗಡಿಯಲ್ಲಿ ನಡೆದಿದ್ದ ಅಪಘಾತದಲ್ಲಿ ಹದಿ ಹರೆಯದ ಮಕ್ಕಳು ಬಲಿಯಾದ ಘಟನೆ ಹಾಗೂ ನಗರದಾದ್ಯಂತ ಹಲವು ದ್ವಿಚಕ್ರ ವಾಹನ ಅಪಘಾತಗಳ ಬಗ್ಗೆ ಜುಲೈ 1 ರಂದು ನಡೆದ ನಗರ ಪೊಲೀಸ್ ಕಮೀಷನರ್ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರು, ಇನ್ನು ಮುಂದೆ ಮಕ್ಕಳು ದ್ವಿಚಕ್ರ ಚಲಾಯಿಸಿ ಅಪಘಾತ ನಡೆಸಿದರೆ ಮಕ್ಕಳ ಹೆತ್ತವರ ವಿರುದ್ಧವೇ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇನ್ನು ಆರ್‌ಸಿ ಓನರ್ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದು, ಅದರ ಜೊತೆಯಲ್ಲಿ ಮಕ್ಕಳ ಹೆತ್ತವರಿಗೆ ಶೀಘ್ರದಲ್ಲೇ ಕಾರ್ಯಾಗಾರ ನಡೆಸಲಾಗುವುದು ಎಂದರು