ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಜಿಲ್ಲೆಗಳ ಬುಡಕಟ್ಟು ಸಮುದಾಯಗಳ ಜನರೊಂದಿಗೆ ಜುಲೈ 3ರಂದು ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಜೆ 7ರಿಂದ 7.30ರವರೆಗೆ ಸಂವಾದ ಸಂವಾದ ನಡೆಸಲಿದ್ದಾರೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಉಪಸ್ಥಿತರಿರುವರು.ಗುಂಡ್ಲುಪೇಟೆ ದೇಶಿಪುರ ಕಾಲೊನಿಯ ಸಿದ್ದಮ್ಮ, ಪುಟ್ಟಮ್ಮ, ಮದ್ದೂರು ಕಾಲೊನಿಯ ಗೋವಿಂದ, ಎಚ್.ಡಿ.ಕೋಟೆಯ ಬಸಮ್ಮ, ರಾಜೇಶ್, ಅಯ್ಯಪ್ಪ, ಭೈರಾ, ಸಿ. ಭಾಸ್ಕರ, ಪುಟ್ಟಬಸವಯ್ಯ, ಹುಣಸೂರಿನ ಜೆ.ಪಿ. ಪಾರ್ವತಿ, ಸುಮಾ, ರಾಜಪ್ಪ, ಸಚಿನ್, ಪಿರಿಯಾಪಟ್ಟಣದ ಜಯಮ್ಮ, ಗೌರಿ, ಲಕ್ಷ್ಮೀ, ಜಾನಕಮ್ಮ, ಬಸವಣ್ಣ, ಬಸಪ್ಪ, ಸರಗೂರಿನ ವಿಜಯ್, ಸೋಮವಾರಪೇಟೆಯ ಜೆ.ಕೆ. ಮುತ್ತಮ್ಮ, ಬಿ.ಕೆ. ಧರ್ಮಪ್ಪ, ಉಡುಪಿ ಜಿಲ್ಲೆಯ ನಳಿನಿ, ಡಾ. ಸಬಿತಾ, ಸುಶೀಲಾ, ಪ್ರಕೃತಿ, ಶಕೀಲಾ, ಸುನಂದಾ, ಕುಡ್ಪಾ, ಬಾಬು, ರಮೇಶ್, ಕೊಗ್ಗ, ಅಕ್ಷಯ್, ಕುಮಾರ್, ಸಂಜೀವ ಕೊರಗ, ಕೆ.ಪುತ್ರಯ, ದಕ್ಷಿಣ ಕನ್ನಡ ಜಿಲ್ಲೆಯ ರತ್ನ, ಚಂದ್ರವತಿ, ಶಶಿಕಲಾ, ರಾಧಾ, ಎಂ.ಸುಂದರ್, ಬಾಬು, ಮಥಾಡಿ, ಶ್ಯಾಮ್ ಭಾಗವಹಿಸಲಿದ್ದಾರೆ ಎಂದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ತಿಳಿಸಿದ್ದಾರೆ.