ಉಡುಪಿ :ಜುಲೈ 03, ಸೋಮವಾರ ಕೆ.ಎಂ ಮಾರ್ಗದಲ್ಲಿರುವ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಗುರುಪೂರ್ಣಿಮಾ ಉತ್ಸವ ನಡೆಯಲಿದೆ.
ಬೆಳಗ್ಗೆ ಗಂಟೆ 5 ಗಂಟೆಗೆ ಸರಿಯಾಗಿ ಕಾಕಡ ಆರತಿ, 6 ಗಂಟೆಯಿಂದ 8-00 ಗಂಟೆಯವರೆಗೆ ಗುರುದೇವರಿಗೆ ಸರ್ವಭಕ್ತಾದಿಗಳಿಂದ ಸೀಯಾಳ ಅಭಿಷೇಕ, 8 ಕ್ಕೆ ಆರತಿ.8-30 ರಿಂದ ಮಧ್ಯಾಹ್ನ 12-00 ಗಂಟೆಯವರೆಗೆ ನಿತ್ಯಾನಂದ ಭಜನಾ ಮಂಡಳಿ ಉಡುಪಿ ಇವರಿಂದ ಭಜನಾ ಕಾರ್ಯಕ್ರಮ, ನಡೆಯಲಿದ್ದು ಮಹಾಪೂಜೆ. ಬಳಿಕ 12-30 ರಿಂದ ಸಂಜೆ ಗಂಟೆ 5-45 ರ ವರೆಗೆ, ಡಾ.ದೀಪಕ್ ಪ್ರಭು ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ.ಸಂಜೆ 5-45 ರಿಂದ ರಾತ್ರಿ 7-45 ರವರೆಗೆ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಬನ್ನಂಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 7-45 ಗಂಟೆಗೆ ಪಲ್ಲಕಿ ಉತ್ಸವ, 8 ಗಂಟೆಗೆ ಮಹಾಪೂಜೆ, ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಆಗಮಿಸುವ ಭಕ್ತರಿಗೆ ಭಗವಾನ್ ನಿತ್ಯಾನಂದ ಮಂದಿರ ಮಠ-ಉಡುಪಿ ಇದರ ಕಾರ್ಯಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಸ್ವಾಗತ ಕೊರಿದ್ದಾರೆ