ಕಾರ್ಕಳ : ಜುಲೈ 1 ರಂದು ಪ್ರತಿ ವರ್ಷದಂತೆ ಈ ವರ್ಷವೂ ದೇಶದಾದ್ಯಂತ ವೈದ್ಯರ ದಿನಾಚರಣೆ ಯನ್ನು ಆಚರಿಸುತ್ತೇವೆ,ವೈದ್ಯರ ವೃತ್ತಿಯು ಪವಿತ್ರವಾದ ವೃತ್ತಿಯಾಗಿರುತ್ತದೆ,ಜನರು ಕಷ್ಟ ದಲ್ಲಿರುವಾಗ ಅವರ ಕಷ್ಟವನ್ನು ನಿವಾರಿಸಿ ಅವರಿಗೆ ಆರೋಗ್ಯವನ್ನು ನೀಡುವ ಅವಕಾಶವಿರುವ ಒಂದು ವೃತ್ತಿ ಹಾಗೂ ವೈದ್ಯರ ಮತ್ತು ಸಮಾಜದ ಜನರ ನಡುವಿನ ಬಾಂಧವ್ಯ ಕೂಡಾ ಪವಿತ್ರವಾದದ್ದು,ಇದು ಪರಸ್ಪರ ಪ್ರೀತಿ ವಿಶ್ವಾಸದ ಮೇಲೆ ನಿಂತು ಕೊಂಡಿರುವ ಭಾಂದವ್ಯ ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ವೈದ್ಯರ ಮತ್ತು ಸಮಾಜದ ಜನರ ನಡುವಿನ ವಿಶ್ವಾಸ ಸ್ವಲ್ಪ ಮಟ್ಟಿಗೆ ಕಡಿಮೆ ಯಾಗಿದ್ದನ್ನು ಕಂಡಿದ್ದೇವೆ,
ಇದು ನಿಜವಾಗಿ ಬೇಸರದ ವಿಷಯವಾಗಿದೆ,ವೈದ್ಯರ ದಿನಾಚರಣೆಯಂದು ದೇಶದಾದ್ಯಂತ ಹಿರಿಯ ವೈದ್ಯರನ್ನು ಕರೆದು ಸನ್ಮಾನ ಮಾಡುವ ಮತ್ತು ಅವರಿಗೆ ಗೌರವ ತೋರಿಸುವ ಹಲವು ಕಾರ್ಯಕ್ರಮಗಳು ಜುಲೈ 1 ಕ್ಕೆ ಸೀಮಿತವಾಗಿರದೆ ನಿರಂತರ ನಡೆಯುತ್ತಲೇ ಇದೆ,ವೈದ್ಯರು ಹಾಗೂ ಜನರ ನಡುವೆ ಪ್ರೀತಿ,ವಿಶ್ವಾಸ,ಆತ್ಮೀಯ ಸಂಬಂಧ ವಿರಲಿ ಮತ್ತು ಎಲ್ಲರೂ ಆರೋಗ್ಯವಂತರಾಗಿ ರಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಾಕ್ಟರ್ ಕೆ.ಆರ್.ಜೋಶಿ ತಿಳಿಸಿದರು.
ಕಳೆದ ಮುವತೈದು ವರ್ಷಗಳಿಂದ ಕಾರ್ಕಳದಲ್ಲಿ ನಿರಂತರವಾಗಿ ವೈದ್ಯಕೀಯ ವೃತ್ತಿಯನ್ನು ಮಾಡುತ್ತಾ ಬಂದಿದ್ದೇನೆ,ಎಂದು ಹೇಳಿದರು.ವೈದ್ಯರ ಮತ್ತು ಜನರ ನಡುವಿನ ವಿಶ್ವಾಸ ಕಡಿಮೆಯಾಗಲು ಕಾರಣವೇನು ಎಂದು ತಿಳಿಸಿದರು.