ನವದೆಹಲಿ: ಮುಂದಿನ 15 ದಿನಗಳಲ್ಲಿ ಉತ್ಪದನಾ ಕೇಂದ್ರ ಗಳಿಂದ ಪೂರೈಕೆ ಹೆಚ್ಚಳ ದೊಂದಿಗೆ ಟೊಮೆಟೊ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಮತ್ತು ಒಂದು ತಿಂಗಳಲ್ಲಿ ಬೆಲೆ ಸಾಮಾನ್ಯ ಮಟ್ಟಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಿಂದ ಟೊಮೆಟೊ ಸರಬರಾಜು ಹೆಚ್ಚುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಟೊಮೆಟೊ ಚಿಲ್ಲರೆ ಬೆಲೆ ತಕ್ಷಣವೇ ಕಡಿಮೆಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ..
ಸರಕುಗಳಲ್ಲಿ ಅಂತರ್ಗತ ದುರ್ಬಲತೆ ಇದೆ. ಸಾರಿಗೆ ಕೂಡ ದೊಡ್ಡ ಸಮಸ್ಯೆಯಾಗಿದೆ” ಎಂದು ಅವರು ತಿಳಿಸಿದ್ದಾರೆ. ಜೂನ್-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಸಹ ಕಡಿಮೆ ಉತ್ಪಾದನಾ ಋತುಗಳಾಗಿದ್ದು, ಈ ಅವಧಿಯಲ್ಲಿ ಸಾಮಾನ್ಯವಾಗಿ ಬೆಲೆ ತೀವ್ರ ಏರಿಕೆಯಾಗುವುದು ಸಹಜ ಎಂದು ಅವರು ಹೇಳಿದ್ದಾರೆ.