ಕಾರ್ಕಳ :ಐಸಿವೈಎಂ ಸಿಲ್ವರ್ ಜುಬಿಲಿಯ ಸಂಭ್ರಮಾಚರಣೆಯಲ್ಲಿ ಜಿಲ್ಲೆ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ ಫಾ|ಕ್ಲೆಮೆಂಟ್ ಮಸ್ಕರೆನ್ಹಾಸ್ ಇವರ ನಿರ್ದೇಶನದಲ್ಲಿ ಕಾಕ೯ಳ ಟೌನ್ ಘಟಕ ಅಧ್ಯಕ್ಷ ಲೋಯ್ಡ್ ಡಿ’ಸೋಜ ಸಾನೂರು,ಇವರ ಮುಂದಾಳತ್ವದಲ್ಲಿ ಜೋನ್ಸ್ ಸ್ಪೋರ್ಟ್ಸ್ ಅಕಾಡೆಮಿ, ಕಾರ್ಕಳ ಇಲ್ಲಿ 25.6.2023 ಆದಿತ್ಯವಾರ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ವಿಜಯ್ ಲ್ಯಾನ್ಸಿ ಮಸ್ಕರೆನ್ಹಾಸ್(ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ರವೀಣ), ಕಾಕ೯ಳ ಕ್ರಿಸ್ತ ರಾಯ ಚಚ್೯ ಮಂಡಳಿ ಉಪಾಧ್ಯಕ್ಷರಾದ ನೇವಿಲ್ ಡಿ’ಸಿಲ್ವ,ಜೋನ್ಸ್ ಸ್ಪೋರ್ಟ್ಸ್ ಅಕಾಡೆಮಿಯ ಮ್ಹಾಲಕ ಜೋನ್ ಡಿ’ಸಿಲ್ವ, ಐಸಿವೈಎಂ ಸಂಚಾಲಕಿ ಶ್ರೀಮತಿ ರೇಷ್ಮಾ ಡಿಸೋಜಾ, ರಿಚರ್ಡ್ ಮಿರಂಡಾ, ನೆಲ್ಸನ್ ಡಿ’ಸೋಜ, ರೊಯನ್ ಪಾಯ್ಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು
ಅಧ್ಯಕ್ಷ ಫ್ಲೋಯ್ಡ್ ಡಿ’ಸೋಜಾರು ಸ್ವಾಗತಿಸಿದರು, ಮೆಕ್ನೆಲ್ ರೊಡ್ರಿಗಸ್ ಧನ್ಯವಾದವಿತ್ತರು. ಜೋನ್ ಡಿಸೋಜಾ ಕಾರ್ಯ ನಿರ್ವಾಹಿಸಿದರು,ಸುಮಾರು 300 ಆಟಗಾರರು ಭಾಗವಹಿಸಿದ್ದರು.