ಉಡುಪಿ : ಆನ್ ಲೈನ್ ಜಾಬ್ ಇದೆ ಎಂದು ನಂಬಿಸಿ ಯುವತಿಯೊಬ್ಬರಿಗೆ ಅಮೇಜಾನ್ ವೆಬ್‌ಸೈಟ್‌ನಲ್ಲಿ 2. 88 ಲಕ್ಷ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಧ್ಯಾ ಎಸ್ ಎಂಬುವವರು ಉದ್ಯೋಗಕ್ಕಾಗಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್‌ನಲ್ಲಿ ಹುಡುಕುತ್ತಿರುವಾಗ ಅಮೇಜಾನ್ ವರ್ಕ್ ಫ್ರಮ್ ಹೋಮ್ ಎಂಬ ಲಿಂಕ್ ಕಂಡಿದ್ದು, ಆ ಲಿಂಕ್ ಕ್ಲಿಕ್ ಮಾಡಿದಾಗ ಸಿಕ್ಕ ಮೊಬೈಲ್ ನಂಬರ್‌ಗೆ ಸಂಪರ್ಕಿಸಿದಾಗ ಆರೋಪಿಗಳು ಅಮೇಜಾನ್ ವೆಬ್‌ಸೈಟ್‌ನವರು ಎಂದು ತಿಳಿಸಿದ್ದರು.
ಅಲ್ಲದೆ ವೆಬ್ ಸೈಟ್‌ನಲ್ಲಿ ಟಾಸ್ಕ್ ಇದ್ದು ಇದರಿಂದ ಹಣಗಳಿಸಬಹುದು ಎಂದು ತಿಳಿಸಿದ್ದರು.
ಇದನ್ನು ನಂಬಿದ ಸಂಧ್ಯಾ ಅವರು ಜೂ. 26 ಮತ್ತು ಜೂ. 27 ರಂದು ಹಂತ ಹಂತವಾಗಿ ಒಟ್ಟು 2, 88, 991 ಹಣವನ್ನು ಆನೈನ್ ಮೂಲಕ ವರ್ಗಾವಣೆ ಮಾಡಿದ್ದರು.
ಆದರೆ ಆರೋಪಿಗಳು ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.