ಉಡುಪಿ: ಬೆಂಗಳೂರು ಮಹಾನಗರದಲ್ಲಿ ಮತ್ತು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಆಷಾಢ ಶುದ್ಧ ಏಕಾದಶಿ ಎಂದು ಆಚರಿಸಲ್ಪಡುವ ತಪ್ತ ಮುದ್ರಾ ಧಾರಣೆಯ ಪ್ರಯುಕ್ತ ಪಲಿಮಾರು ಮಠದ ಹಿರಿಯ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಕಿರಿಯ ವಿದ್ಯಾರಾಜೇಶ್ವರ ತೀರ್ಥರು ಭಕ್ತರಿಗೆ ಮುದ್ರಾ ಧಾರಣೆಯನ್ನು ಮಾಡಿದರು
ಮುದ್ರಾ ಧಾರಣೆಯ ಪ್ರಯುಕ್ತ ನೂರಾರು ಭಕ್ತರು ಮಠಕ್ಕೆ ಆಗಮಿಸಿ ಮುದ್ರಾ ಧಾರಣೆ ಹಾಕಿಸಿಕೊಂಡರು ಇದೇ ಸಂದರ್ಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು