ಮಣಿಪಾಲ :ಟೆರಸ್ ಮೇಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ 80 ಬಡಗುಬೆಟ್ಟು ಗ್ರಾಮದ ದಶರಥನಗರ ದಲ್ಲಿ ನಡೆದಿದೆ.
ಮೃತರನ್ನು ಧಾರವಾಡ ಮೂಲದ ನಾಮದೇವ ಜಾಧವ್ ಎಂಬವರ ಮಗ ಆಯುಷ್(8) ಎಂದು ಗುರುತಿಸಲಾಗಿದೆ.
ಬಾಲಕ್ ಆಯುಷ್ ಗೆ ನಾಲಿಗೆಯ ಶಸ್ತ್ರ ಚಿಕಿತ್ಸೆಗಾಗಿ ಜೂ.21ರಂದು ಮಣಿಪಾಲಕ್ಕೆ ಬಂದು ದಶರಥ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು.
ಜೂ.25ರಂದು ಮಧ್ಯಾಹ್ನ ವೇಳೆ ಇತರ ಮಕ್ಕಳೊಂದಿಗೆ ಮನೆಯ ಟೆರಸ್ ಮೇಲೆ ಆಟ ಆಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಟೆರಸ್ನಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಗಾಯಗೊಂಡ ಆಯುಷ್ನನ್ನು ತಕ್ಷಣ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಜೂ.26ರಂದು ಮಧ್ಯಾಹ್ನ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ