ಕುಂದಾಪುರ : ಈ ಬಾರಿ ಕಾಣಿಸಿಕೊಂಡಿದ್ದ ಬಿಪರ್ ಜಾಯ್ ಚಂಡ ಮಾರುತದಿಂದ ಮತ್ತೆ ಮರವಂತೆ ಫಿಶರೀಷ್ ರಸ್ತೆಗೆ ಹಾನಿಯಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ರೀತಿ ಕ್ರಮಗಳನ್ನು ಕೈಗೊಂಡಿರಲಿಲ್ಲ. ಚಂಡಮಾರುತದ ಪ್ರಭಾವದಿಂದ ಕರಾವಳಿ ಭಾಗದ ಮರವಂತೆಯಲ್ಲಿ ಹಾನಿಯಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವರು ಇತ್ತ ಕಡೆ ದೃಷ್ಟಿಯನ್ನು ಹಾಯಿಸದೆ ತಮಗೂ ಕಡಲ್ಕೊರೆತಕ್ಕೂ ಯಾವುದೆ ರೀತಿ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಇದರಿಂದ ಬೇಸತ್ತ ಮೀನುಗಾರರು ರಸ್ತೆ ಸಂಪರ್ಕ ವ್ಯವಸ್ಥೆಗಾಗಿ ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ವತಿಯಿಂದ ಸುಮಾರು 10.ಲಕ್ಷ.ರೂ ವ್ಯಯಿಸಿ ಕಡಲ ದಂಡೆಗೆ ಕಲ್ಲುಗಳನ್ನು ಹಾಕಿ ಸುಮಾರು 100.ಮೀಟರ್ ವರೆಗಿನ ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡಿದ್ದಾರೆ.