ಉಡುಪಿ: ಅಪರಿಚಿತ ವಾಹನ ಢಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಕೋಟದ ಕಾವಡಿಯಲ್ಲಿ ಎಂಬಲ್ಲಿ ನಡೆದಿದೆ. ಮೃತರನ್ನು ಬಾರ್ಕೂರು ಸಮೀಪ ಹೇರಾಡಿ ನಿವಾಸಿ ನಾಗೇಶ್ ಆಚಾರ್ಯ (32) ಎಂದು ಗುರುತಿಸಲಾಗಿದೆ.
ಮೃತ ನಾಗೇಶ್ ಅವರು ಕೋಟ ಸಮೀಪದ ಖಾಸಗಿ ಗೇರುಬೀಜ ಕಾರ್ಖಾನೆಯಲ್ಲಿ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ವಾಪಸಾಗುವಾಗ ಕಾವಡಿ ಸೇತುವೆ ಸಮೀಪ ಯಾವುದೋ ವಾಹನ ಢಿಕ್ಕಿಯಾಗಿ ಬಿದ್ದುಕೊಂಡಿದ್ದರು
ಇನ್ನು ಸ್ವಲ್ಪ ಸಮಯದ ಬಳಿಕ ಪರಿಚಯಸ್ಥರೋರ್ವರು ಅದೇ ದಾರಿಯಲ್ಲಿ ಬರುವಾಗ ಗಮನಿಸಿ ಚಿಕಿತ್ಸೆಗಾಗಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.