ಬೆಂಗಳೂರು: ತೆಲಂಗಾಣದಿಂದ ಭತ್ತ, ಛತ್ತೀಸಗಢದಿಂದ ಅಕ್ಕಿ ಖರೀದಿ ಮಾಡಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ತಿಳಿಸಿದರು.
ಇದೇ ವೇಳೆ ಅವರು ಮಾತನಾಡಿ, ಪಂಜಾಬ್ ಸರ್ಕಾರವೂ ನವೆಂಬರ್ ತಿಂಗಳಿನಿಂದ ಕೊಡುವುದಾಗಿ ತಿಳಿಸಿದೆ.
NCCF ಕೇಂದ್ರಿಯ ಭಂಡಾರ, ನಫೆಡ್ನಿಂದ ಅಕ್ಕಿ ಖರೀದಿ ಬಗ್ಗೆ ಮಾಹಿತಿ ಕೇಳಿದ್ದೆವೆ ಅವರ ಮಾಹಿತಿ ನೀಡಿದ ಬಳಿಕ ಅವರಲ್ಲಿರುವ ದಾಸ್ತಾನಿನ ಗುಣಮಟ್ಟ, ಪ್ರಮಾಣ ನೋಡಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು. ಇನ್ನೂ ರಾಜ್ಯಕ್ಕೆ 2 ಲಕ್ಷದ 29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದು, ಈ ನಿಟ್ಟಿನಲ್ಲಿ ಪಂಜಾಬ್ , ಆಂಧ್ರಪ್ರದೇಶದವರ ಬಳಿ ಇಲ್ಲ ಅಂತ ಹೇಳಿದ್ದಾರೆ. ಇಂದು 3 ಗಂಟೆಗೆ ಸಭೆ ಕರೆದಿದಿದ್ದು ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಅಂತ ತಿಳಿಸಿದರು.