ಬೆಂಗಳೂರು: ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ಅಕ್ಕಿ ದರ ಹೆಚ್ಚಳಕ್ಕೆ ರೈಸ್ ಮಿಲ್ ಮಾಲೀಕರು ಮುಂದಾಗಿದ್ದಾರೆ. ಈ ಬೆನ್ನಲ್ಲೇ ಹೋಟೆಲ್ ಆಹಾರ ಪ್ರಿಯರಿಗೆ ಶಾಕ್ ಎನ್ನುವಂತೆ ಹೋಟೆಲ್ ತಿಂಡಿ, ಊಟಗಳ ದರ ಕೂಡ ಹೆಚ್ಚಾಗಲಿದೆ ಎಂಬುದಾಗಿ ಹೇಳಲಾಗುತ್ತಿದೆ.
ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವಂತ ಜನರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ವಿದ್ಯುತ್ ದರ ಹೆಚ್ಚಳದ ಕಾರಣ, ಹೋಟೆಲ್ ಊಟೋಪಚಾರಗಳ ಬೆಲೆಯೂ ಶೇ.5 ರಿಂದ 10ರಷ್ಟು ತುಟ್ಟಿಯಾಗುವ ಸಾಧ್ಯತೆ ಇದೆ.
ಈಗಾಗಲೇ ನಗರದ ಅನೇಕ ಹೋಟೆಲ್ ಗಳು ಸದ್ದಿಲ್ಲದೇ ದರಗಳನ್ನು ಹೆಚ್ಚಳ ಮಾಡಿವೆ. ಇದೀಗ ಅಧಿಕೃತವಾಗಿ ಬೆಂಗಳೂರು ಹೋಟೆಲ್ ಸಂಘವು ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, ನಗರದ ಬಹುತೇಕ ಹೋಟೆಲ್ ಗಳಿಂದ ದರ ಹೆಚ್ಚಳಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಅಂದಹಾಗೇ ಚಹಾ ರೂ.15ರಿಂದ 16, 18 ರೂ ಆಗಲಿದೆ. ಕಾಫಿ ರೂ.15ರಿಂದ ರೂ.18, 20 ಆಗುವ ಸಾಧ್ಯತೆ ಇದೆ. ಊಟ ರೂ.80ರಿಂದ ರೂ.95,100 ಆಗುವ ಸಾಧ್ಯತೆ ಇದೆ. ಇಡ್ಲಿ ರೂ.30ರಿಂದ 35, ಪೂರಿ ರೂ.50ರಿಂದ 60 ಇಲ್ಲವೇ 65 ರೂ ಹೆಚ್ಚಳವಾಗುವ ಸಾಧ್ಯತೆ ಇದೆ. ರೈಸ್ ಬಾದ್ ರೂ.45 ರಿಂದ ರೂ.55, ಚೌಚೌಬಾತ್ ರೂ.40ರಿಂದ 50 ರೂ ಹೆಚ್ಚಳ ಆಗುವ ಸಾಧ್ಯತೆ ಇದೆ.