ಉಡುಪಿ :ಕಲಾನಿಧಿ ( ರಿ.) ಉಡುಪಿ, ರಾಗವಾಹಿನಿ (ರಿ.) ಉಡುಪಿ ಸೃಷ್ಟಿ ಪೌಂಡೇಶನ್ ಉಡುಪಿ ಇವರು ನಡೆಸುತ್ತಿರುವ ರಾಜ್ಯ ಮಟ್ಟದ ನನ್ನ ಹಾಡು ನನ್ನದು ಸೀಸನ್ 5 ಸುಗಮ ಸಂಗೀತ ಸ್ಪರ್ಧೆಯ ಆಡಿಷನ್ ಜುಲೈ 2 ನೇ ತಾರೀಕು ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.
15 ವರುಷದಿಂದ 45 ವರುಷದೊಳಗಿನ ಸಂಗೀತಗಾರರು ಭಾಗವಹಿಸಬಹುದು. ಪ್ರೊಫೆಷನಲ್ ಸಿಂಗರ್ಸಗೆ ಅವಕಾಶ ಇಲ್ಲ. ಪ್ರಥಮ ಸುತ್ತಿನಲ್ಲಿ ಭಕ್ತಿ ಗೀತೆ ಹಾಡಬೇಕು. ಆಯ್ಕೆಯಾದವರು ಮದ್ಯಾಹ್ನ ನಡೆಯುವ ಸೆಮಿ ಫೈನಲ್ಗೆ ಭಾವಗೀತೆ ಹಾಡಬೇಕು.
ಪ್ರಥಮ ಬಹುಮಾನ 10,000 ರೂಪಾಯಿ ಮತ್ತು ಟ್ರೋಫಿ. ದ್ವಿತೀಯ ಬಹುಮಾನ 5000 ರೂಪಾಯಿ ಮತ್ತು ಟ್ರೋಫಿ. ಹೆಸರು ನೋಂದಾಯಿಸಲು ಕೊನೆಯ ದಿನಾಂಕ 30-6-2023. ಸಂಪರ್ಕಿಸಿ. 9110274814, 9483802494, 9964019229, 9632144146