ಉಡುಪಿ:ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಮತ್ತು ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈ.ಲಿ ಸಹಯೋಗದಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ನಿರ್ಮಾಣವಾದ ರೈತ ಸೇವಾ ಕೇಂದ್ರದ ಮೇಲ್ಚಾವಣಿಯ ಲೋಕಾರ್ಪಣೆ ಮತ್ತು ಹಲಸು ಮೇಳ 2023 ಇದೇ ಬರುವ ಜೂನ್ 22 ಗುರುವಾರದಿಂದ ರಿಂದ ಜೂನ್ 25 ರವಿವಾರದ ವರೆಗೆ ಪುಷ್ಪ ಹರಾಜು ಕೇಂದ್ರ ರೈತ ಸೇವಾ ಕೇಂದ್ರದ ಆವರಣ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ನಡೆಯಲಿದೆ .
ರಾಜ್ಯದ ವಿವಿಧ ಜಾತಿ ಹಲಸಿನ ಹಣ್ಣಿನ ಮಾರಾಟ, ಹಲಸಿನ ಖಾದ್ಯಗಳು, ಹಲಸಿನ ಗಿಡಗಳ ಮಾರಾಟ ಹಾಗೂ ವಿಚಾರ ಸಂಕಿರಣ ನಡೆಯಲಿದೆ.
ಮಳಿಗೆಗಳನ್ನು ತೆರೆಯಲು ಇಚ್ಛಿಸುವ ರೈತರು ಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9900910948