ಉಡುಪಿ :ಯುವ ನ್ಯಾಯವಾದಿ ಸುಲತಾ (35) ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿನಿಧನ ಹೊಂದಿದರು.ಉಚಿತ ಕಾನೂನು ಸಲಹೆಗಾರ್ತಿಯಾಗಿದ್ದ ಇವರು, ಸರಕಾರಿ ಅಭಿಯೋಜಕಿಯಾಗಿಯೂ ನೇಮಕಗೊಂಡಿದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಸಹಿತ ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಉಡುಪಿಯ ವಕೀಲರ ಸಂಘದ ಅತ್ಯಂತ ಪ್ರತಿಭಾನ್ವಿತ ವಕೀಲರಲ್ಲಿ ಒಬ್ಬರಾಗಿದ್ದು, ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ನ್ಯಾಯಾಧೀಶೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೌಖಿಕ ಸಂದರ್ಶನವನ್ನು ಎದುರಿಸುತ್ತಿದ್ದ ಮತ್ತು ಸಹಾಯಕ ಸರಕಾರಿ ಅಭಿಯೋಜಕರ ಹುದ್ದೆಗೆ ಆಯ್ಕೆಯಾಗಿದ್ದ ಸುಲತಾ ಅವರ ನಿಧನಕ್ಕೆ ಅಂಬೇಡ್ಕರ್ ಯುವಸೇನೆ ಸಂತಾಪ ಸೂಚಿಸಿದೆ. ಮೃತರು ತಂದೆ, ತಾಯಿ, ಪುತ್ರನನ್ನು ಅಗಲಿದ್ದಾರೆ.