ಬ್ರಹ್ಮಾವರ: ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಕಜೆ ಶ್ರೀ ಶಾಖಾ ಮಠದಲ್ಲಿ ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರ 41ನೇ ಚಾರ್ತುಮಾಸ್ಯವೃತಾನುಷ್ಠಾನ ಜುಲೈ 3ರಿಂದ ಸೆಪ್ಟೆಂಬರ್ 29ರ ತನಕ ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ಬಿಡುಗಡೆ ಗೊಳಿಸಿದರು . ವಿದ್ವಾನ್ ಹೆಬ್ರಿ ಚಂದ್ರಕಾಂತ್ ಶರ್ಮ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ವಿವಿಧ ಸಮಿತಿಗಳ ಮುಖ್ಯಸ್ಥರು ಪದಾಧಿಕಾರಿಗಳು, ಚಾತುರ್ಮಾಸ್ಯ ವೃತಾನುಷ್ಠಾನ ಸಮಿತಿಯ ಅಧ್ಯಕ್ಷ ವಿಶ್ವನಾಥ ಆಚಾರ್ಯ ಕಲ್ಲೋಳಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ ಕೊಂಜಾಡಿ, ಕಜೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಪತ್ರಕರ್ತ ಸುಕುಮಾರ್ ಮುನಿಯಾಲ್ ಉಪಸ್ಥಿತರಿದ್ದರು.ನಾನಾ ಸಮಿತಿಯ ಪ್ರಮುಖರಾದ ವೆಂಕಟರಮಣ ಆಚಾರ್ಯ ಪೆರ್ಡೂರು,ನರಸಿಂಹ ಆಚಾರ್ಯ ಹೆಮ್ಮಾಡಿ, ಮೋಹನ ಆಚಾರ್ಯ ಸೂರಾಲು,ಶಂಭು ಆಚಾರ್ಯ ಕೊಕ್ಕರ್ಣೆ, ಮಂದಾರ ಆಚಾರ್ಯ ಮಾರಾಳಿ, ಜಯರಾಮ ಆಚಾರ್ಯ ಮಿಯ್ಯಾರು ಸೇರಿದಂತೆ ವಿವಿಧ ಗಣ್ಯರು, ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.