ಉಡುಪಿ : ಚಿಟ್ಟಾಡಿಯ ನಿವಾಸಿ ರಾಜ್ ಕುಮಾರ್ ಉಪಾಧ್ಯಾಯ (56)ರವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಪತ್ರಿಕಾ ಏಜೆಂಟರಾಗಿ, ಹಾಲು ವಿತರಣೆಯನ್ನು ಹಾಗೂ ಉಡುಪಿಯಲ್ಲಿ ನಡೆಯುವ ಶುಭಕಾರ್ಯಕ್ರಮಗಳಲ್ಲಿ ಅಡುಗೆಯನ್ನು ಬಡಿಸುವ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಉಡುಪಿ ಹಾಗೂ ರಥಬೀದಿಯಲ್ಲಿ ಉತ್ತಮ ಜನಮನ್ನಣೆಯನ್ನು ಹೊಂದಿದವರಾಗಿದ್ದರು. ಇವರ ನಿಧನಕ್ಕೆ ಉಡುಪಿ ರಥಬೀದಿಯ ವ್ಯಾಪಾರಸ್ಥರು, ರಥಬೀದಿ ಗಣೇಶೋತ್ಸವ ಸಮಿತಿ ಹಾಗೂ ಅಪಾರ ಅಭಿಮಾನಿಗಳು ಸಂತಾಪವನ್ನು ಸೂಚಿಸಿರುತ್ತಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.