ಬೆಂಗಳೂರು: ಜುಲೈ 7 ರಂದು ನೂತನ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ಬೇಕಾಗಿರುವಗ ಪೂರಕ ಮಾಹಿತಿಗಾಗಿ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿದ್ದು, ಇಂದು 14 ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಈ ಹಿಂದೆ 13 ಬಾರಿ ಬಜೆಟ್ ಮಂಡಿಸಿದ್ದು ಇದೀಗ 14ನೇ ಬಾರಿಗೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದು, ಬಹುಮತದೊಂದಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಈ ಬಾರಿ ಜನರು ಆಸೆಯನ್ನು ಇಟ್ಟುಕೊಂಢಿದ್ದಾರೆ.
ಈಗಾಗಲೇ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಹೇಳಿರುವ ಕಾಂಗ್ರೆಸ್ ಸರ್ಕಾರ, ಆರ್ಥೀಕ ದಿವಾಳಿಯಾಗದೇ ರಾಜ್ಯವನ್ನು ಹೇಗೆ ಕಾಪಾಡಲಿದ್ದಾರೆ ಎನ್ನುವುದಕ್ಕೆ ಬಜೆಟ್ ದಿನ ತಿಳಿಯಲಿದೆ.