ಬೈಂದೂರು : ಮರವಂತೆ ಬ್ರೇಕ್ ವಾಟರ್ ಉತ್ತರ ದಿಕ್ಕಿನ100 ಮೀಟರ್ ಅಂತರದಲ್ಲಿ ಸಮುದ್ರದ ರಕ್ಕಸ ಅಲೆಗೆ ಮೀನುಗಾರಿಕೆ ಸಂಪರ್ಕ ರಸ್ತೆ ಜಖಂಗೊಂಡಿದ್ದು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ,
ಅರಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಕರಾವಳಿಗೆ ಬೀಪರ್ ಬಾಯ್ ಚಂಡಮಾರುತ ಅಪ್ಪಳಿಸಿದ್ದು ಚಂಡಮಾರುತ ತೀವ್ರತೆಯ ಪರಿಣಾಮದಿಂದ ಸಮುದ್ರದ ರಕ್ಕಸ ಅಲೆಗಳು ತಡೆಗೋಡೆಗೆ ಅಪ್ಪಳಿಸಿ ಸಂಪರ್ಕ ರಸ್ತೆ ಕುಸಿತಗೊಂಡಿದ್ದು ಮೀನುಗಾರರು ಭಯದ ವಾತಾವರಣದಲ್ಲಿ ಇದ್ದಾರೆ
ಕಳೆದ ವರ್ಷ ತೌಕೆ ಚಂಡಮಾರುತದಿಂದ ತತ್ತರಿಸಿದ ಗ್ರಾಮದ ಜನರು ಈ ವರ್ಷ ಬಿಪರ್ ಬಾಯ್ ಚಂಡಮಾರುತದಿಂದ ಮತ್ತೆ ರಕ್ಕಸ ಅಲೆಯು ತಡೆಗೋಡೆಗೆ ಅಪ್ಪಳಿಸಿ ರಸ್ತೆ ಬಿರುಕು ಬಿಟ್ಟಿದ್ದು, ಮತ್ತು ಸಮುದ್ರದ ಅಲೆಯ ತೀವ್ರ ತೆ ಜಾಸ್ತಿಯಾಗಿ ಮೀನುಗಾರರ ಮನೆಗೆ ತೊಂದರೆ ಆಗುವ ಸಾಧ್ಯತೆ ಇದ್ದು ಜನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಮತ್ತು ಶಾಲಾ ವಾಹನಗಳಿಗೆ ಜನಸಂಚಾರ ಸ್ಥಗಿತ ಗೊಂಡಿದ್ದು ಮೂಲಭೂತ ಸೌಕರ್ಯಕ್ಕೆ ಅಡೆ ತಡೆ ಉಂಟಾಗುತ್ತದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ಇತ್ತ ಕಡೆ ಗಮನ ಹರಿಸಿ ಬೇಕಾಗಿ ಮೀನುಗಾರು ತಮ್ಮ ನೊವನ್ನುತೋಡಿಕೊಂಡರು