ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ರವರು ಮಲ್ಪೆ ಮೀನುಗಾರರ ಸಂಘದಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಮುಂದಿನ ಮೀನುಗಾರಿಕಾ ಋತುವಿನ ಚಟುವಟಿಕೆಗೆ ಪೂರಕವಾಗಿ ಪಾಸ್ ಬುಕ್ ನವೀಕರಣ, ಬಂದರು ಸ್ವಚ್ಚತೆ, ಭದ್ರತೆ ಹಾಗೂ ಸುವ್ಯಸ್ಥಿತ ನಿರ್ವಹಣೆಗೆ ಸ್ಥಳೀಯ ಮೀನುಗಾರ ಸಂಘಟನೆಗಳಿಗೆ ನೀಡುವ ಬಗ್ಗೆ ಮಾರ್ಗಸೂಚಿ ತಯಾರಿಕೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ಪೂರಕ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದರು
ಸಭೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಕೆ. ಸುವರ್ಣ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ವಿವೇಕ್, ಬಂದರು ಇಲಾಖೆಯ ಅಭಿಯಂತರಾದ ಶ್ರೀನಿವಾಸ ಮೂರ್ತಿ, ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳು, ವಿವಿಧ ಮೀನುಗಾರ ಸಂಘಟನೆಗಳ ಮುಖಂಡರು, ಮಹಿಳಾ ಮೀನುಗಾರ ಸಂಘದ ಪದಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಂದಿನ ಮೀನುಗಾರಿಕಾ ಋತುವಿನ ಚಟುವಟಿಕೆಗೆ ಪೂರಕವಾಗಿ ಪಾಸ್ ಬುಕ್ ನವೀಕರಣ, ಬಂದರು ಸ್ವಚ್ಚತೆ, ಭದ್ರತೆ ಹಾಗೂ ಸುವ್ಯಸ್ಥಿತ ನಿರ್ವಹಣೆಗೆ ಸ್ಥಳೀಯ ಮೀನುಗಾರ ಸಂಘಟನೆಗಳಿಗೆ ನೀಡುವ ಬಗ್ಗೆ ಮಾರ್ಗಸೂಚಿ ತಯಾರಿಕೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ಪೂರಕ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದರು.