ಉಚಿತ ಬಸ್ ಪ್ರಯಾಣಕ್ಕೆ ಐಡಿ ಝರಾಕ್ಸ್ ಇದ್ದರೂ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಸಂಬಂಧಿಸಿ ರಾಜ್ಯದ ಹಲವೆಡೆ ಐಡಿ ಪ್ರೂಫ್ ವಿಚಾರಕ್ಕೆ ಕಂಡಕ್ಟರ್ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಗಲಾಟೆ, ಮಾತಿನ ಚಕಮಕಿ ನಡೆದಿವೆ. ಇದರಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ನಕಲು ಪ್ರತಿ ತೋರಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಿಸಬಹುದು ಎಂದು ಹೇಳಿದೆ.
ಐಡಿ ಒರಿಜಿನಲ್ ಇದ್ದರೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿತ್ತು. ಇದು ಮಹಿಳಾ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದರಿಂದ ಕೆಲವೆಡೆ ಗಲಾಟೆಗಳು ಸಹ ಆಗುತ್ತಿವೆ. ಇದರಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, ತಿದ್ದುಪಡಿ ಆದೇಶ ಹೊರಡಿಸಿದ್ದು, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯ ಝರಾಕ್ಸ್ ಇದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾರ್ಡ್ ಮತ್ತು ಸಾಫ್ಟ್ ಕಾಪಿ ಇದ್ದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.