ಮಣಿಪಾಲ : ಅಮೇರಿಕನ್ ಪ್ರತಿಷ್ಠಿತ ಆಸ್ಪತ್ರೆ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ, ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಗ್ಯಾಸ್ಟ್ರೋಎಂಟರಾಲಜಿ ಹಾಗೂ ಹೆಪಟಾಲಜಿ ವಿಭಾಗದೊಂದಿಗೆ ಸಹಯೋಗಕ್ಕೆ ಸಹಿ ಹಾಕಿದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಈ ಗ್ಯಾಸ್ಟ್ರೋಇಂಟೆಸ್ಟಿನಲ್ ಎಂಡೋಸ್ಕೋಪಿ ಘಟಕವನ್ನು ಭಾರತಕ್ಕೆ ಬರುವ ಅಂತರಾಷ್ಟ್ರೀಯ ವೈದ್ಯರಿಗೆ ತರಬೇತಿ ನೀಡಲು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ, ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಬೋಸ್ಟನ್ ಅನುಮೋದಿಸಿದೆ. ಕೆ ಎಂ ಸಿ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಬೋಸ್ಟನ್ ನಡುವೆ ನಾವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿನಿಮಯವನ್ನು ಹೊಂದುವ ಪ್ರತಿಷ್ಠಿತ ಕ್ಷಣ ಇದಾಗಲಿದೆ. ಮಾಹೆ ಮಣಿಪಾಲದ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ.ವೆಂಕಟೇಶ್, ಮತ್ತು ಸಹ ಕುಲಪತಿಗಳಾದ ಡಾ.ಶರತ್ ಕುಮಾರ್ ರಾವ್, ಅವರು ಜಂಟಿಯಾಗಿ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಶಿರನ್ ಶೆಟ್ಟಿ , ಹಾಗೂ ವಿಭಾಗದ ಘಟಕ ಮುಖ್ಯಸ್ಥರುಗಳಾದ ಡಾ. ಗಣೇಶ್ ಪೈ ಮತ್ತು ಡಾ.ಗಣೇಶ್ ಭಟ್ ಅವರಿಗೆ ಅನುಮೋದನೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ , ಮಾಹೆ ಮಣಿಪಾಲದ ಅಂತಾರಾಷ್ಟ್ರೀಯ ಸಹಯೋಗಗಳು ಇದರ ನಿರ್ದೇಶಕರಾದ ಡಾ ಕರುಣಾಕರ್ ಎ ಕೋಟೆಗಾರ್, ಡಾ ಸಿಂಧೂರ ಲಕ್ಷ್ಮಿ ಮತ್ತು ಮಾಹೆ ಮಣಿಪಾಲದ ಮಾಧ್ಯಮ ಹಾಗೂ ಸಂವಹನ ವಿಭಾಗದ ಉಪ ನಿರ್ದೇಶಕರಾದ ಶ್ರೀ ಸಚಿನ್ ಕಾರಂತ್ ಉಪಸ್ಥಿತರಿದ್ದರು.