ಪಡುಬಿದ್ರೆ, ಜೂನ್ 10: ಎರ್ಮಾಳಿನ ಮೂಡಬೆಟ್ಟು ಪ್ರದೇಶದಲ್ಲಿ ರಾತ್ರಿ ಸಮಯ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿ ಕೊಂಡಿದೆ.ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಎರ್ಮಾಳು ಅದಮಾರು ರಸ್ತೆಯ ಮೂಡಬೆಟ್ಟು ಸಮೀಪದಲ್ಲಿ ಚಿರತೆ ಸಂಚರಿಸುತ್ತಿರುವುದು ಕಂಡುಬಂದಿದೆ.
ತಕ್ಷಣ ಸುದ್ದಿ ತಿಳಿದು ಸ್ಥಳೀಯರು ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಕೃಷಿ ಸಹಿತ ಹೈನುಗಾರಿಕೆ ಮಾಡಿ ಜೀವನ ನಡೆಸುವ ಈ ಭಾಗದ ಮಂದಿ ದನಗಳನ್ನು ಹೊರಗೆ ಬಿಡಲು ಹೆದರುತ್ತಿದ್ದಾರೆ. ಸುತ್ತಲೂ ದಟ್ಟ ಪೊದೆಗಳಿಂದ ಕೂಡಿದ್ದು, ಶಾಲಾ ಮಕ್ಕಳು ಸಹಿತ ಸಾರ್ವಜನಿಕರು ಅಡ್ಡಾಡುವ ಈ ಪ್ರದೇಶದಲ್ಲಿ ಚಿರತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಬರ್ಪಣಿ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.