ಮಂಗಳೂರು:ನಗರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕಟೀಲು ಸೇರಿದಂತೆ ಹಲವೆಡೆ ನದಿಯನ್ನೇ ನಂಬಿರುವ ದೇವಸ್ಥಾನಗಳಲ್ಲಿ ತೀರ್ಥ ನೀಡಲೂ ನೀರಿಲ್ಲ!
ಮೂರು ಹೊತ್ತು ದೇವಸ್ಥಾನದಲ್ಲಿ ಅನ್ನಪ್ರಸಾದ ವಿತರಣೆಯಾಗುವ ಕಾರಣ, ಸ್ಟೀಲ್ ಬಟ್ಟಲುಗಳಲ್ಲಿ ಊಟ ವಿತರಿಸಲಾಗುತ್ತಿತ್ತು. ಇದೀಗ ಅದರ ಬದಲಿಗೆ ಅಡಕೆ ಹಾಳೆ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಇದರಿಂದ ಎರಡು ಲಾಭವಿದೆ. ಮೊದಲನೆಯದ್ದು ನೀರಿನ ಉಳಿತಾಯ, ಎರಡನೆಯದ್ದು ಪರಿಸರ ಸಂರಕ್ಷಣೆ. ಹಾಳೆ ತಟ್ಟೆಗಳು ಪ್ಲಾಸ್ಟಿಕ್‌ನಂತಲ್ಲ. ಅದನ್ನು ವಿಲೇವಾರಿ ಮಾಡಲು ಸುಲಭ. ಹೀಗಾಗಿ ಊಟ ನೀಡುವ ಸಂದರ್ಭ ನೀರಿನ ಬಳಕೆ ಕಡಿಮೆ ಮಾಡಬಹುದಾದರೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಅಭಿಷೇಕ, ತೀರ್ಥ ಇತ್ಯಾದಿಗಳಿಗೆ ನೀರು ಬೇಕೇ ಬೇಕು. ಆದರೆ ಅದಕ್ಕೂ ತತ್ವಾರ ಎಂಬಂತಿದೆ ಪರಿಸ್ಥಿತಿ.