ಉಡುಪಿ : ಪೂರ್ಣಪ್ರಜ್ಞ ಕಾಲೇಜಿನಲ್ಲಿಉಡುಪಿ ಜಿಲ್ಲೆ, ಕೇಂದ್ರ ಸರಕಾರದ ನೆಹರು ಯುವ ಕೇಂದ್ರ ಇವರ ವತಿಯಿಂದ ಜೂನ್ 8ರಂದು ನ ಆಯೋಜಿಸಲಾಗಿದ್ದ ಜಿಲ್ಲಾ ಯುವ ಉತ್ಸವವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಜೂನ್ 14ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ 15ರಿಂದ 29 ವರ್ಷದೊಳಗಿನ ಯುವಕ, ಯುವತಿ ಯರಿಗೆ ಚಿತ್ರಕಲೆ,ಕವನ ಬರವಣಿಗೆ, ಮೊಬೈಲ್ ಫೋಟೋಗ್ರಾಫಿ, ಸಾಂಸ್ಕೃತಿಕ ಜಾನಪದ ಗುಂಪು ನೃತ್ಯ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು https://docs.google.com/ spreadsheets/d/1NFFMQa4LRvzWQWprDO2qh qQ-HIkBrjA7jSGQHZooCxo/edit?usp=sharing- ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ನೆಹರು ಯುವ ಕೇಂದ್ರ, ಜಿಲ್ಲಾಡಳಿತ ಕಚೇರಿ, ರಜತಾದ್ರಿ, ಮಣಿಪಾಲ, ಉಡುಪಿ ದೂ. ಸಂಖ್ಯೆ: 0820-2574992, 8762114883, 99805305539 ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.