ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ, ಚುನಾವಣಾ ಆಯೋಗದಿಂದ ಕರ್ನಾಟಕ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ಉಪ ಚುನಾವಣೆಯನ್ನು ಘೋಷಣೆ ಮಾಡಿದೆ.
ಈ ಸಂಬಂಧ ಇಂದು ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆಯನ್ನು ಹೊರಡಿಸಿದೆ.
ಜೂನ್ 17, 2024ರವರೆಗೆ ಬಾಬು ರಾವ್ ಚಿಂಚನಸೂರ್ ಅವರ ವಿಧಾನಪರಿಷತ್ ಅಧಿಕಾರಾವಧಿ ಇತ್ತು. ಆದರೇ ಅವರು ಮಾರ್ಚ್ 20, 2023ರಂದು ರಾಜೀನಾಮೆ ನೀಡಿದ್ದಾರೆ. ಆರ್ ಶಂಕರ್ ಅವರ ಅವಧಿ ಜೂನ್.30, 2026ರವರೆಗೆ ಇತ್ತು. ಅವರು ಎಪ್ರಿಲ್ 12, 2023ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೂನ್ 14, 2028ರವರೆಗೆ ಲಕ್ಷ್ಮಣ್ ಸವದಿಯವರ ವಿಧಾನಪರಿಷತ್ ಸ್ಥಾನದ ಅವಧಿ ಇತ್ತು. ಅವರು ಎಪ್ರಿಲ್ 14, 2023ರಂದು ರಾಜೀನಾಮೆ ನೀಡಿದ್ದರು. ಈ ಮೂರು ಸ್ಥಾನಗಳು ತೆರವಾಗಿರುವುದಾಗಿ ಹೇಳಿದೆ.
ಖಾಲಿಯಾಗಿರುವಂತ ಮೂರು ವಿಧಾನಪರಿಷತ್ತಿನ ಸ್ಥಾನಗಳಿಗೆ ಉಪ ಚುನಾವಣೆಯನ್ನು ಜೂನ್.30ರಂದು ನಡೆಸಲಾಗುತ್ತಿದೆ. ಇದಕ್ಕಾಗಿ ದಿನಾಂಕ 13-06-2023ರಂದು ನೋಟಿಫಿಕೇಷ್ ಹೊರ ಬೀಳಲಿದೆ. 20-07-2023 ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನವಾಗಿದೆ. 21-07-2023ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ದಿನಾಂಕ 23-07-2023ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ದಿನಾಂಕ 30-07-2023ರಂದು ಮತದಾನ ನಡೆಯಲಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 5ಕ್ಕೆ ಮತಏಣಿಕೆಯ ಮೂಲಕ ಫಲಿತಾಂಶ ಘೋಷಣೆ ಆಗಲಿದೆ. ದಿನಾಂಕ 04-07-2023ರಂದು ಉಪ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದಿದೆ.