ಬೆಂಗಳೂರು: ಫ್ರೀ ಫ್ರೀ ಅಂತ ಸದ್ದಿಲ್ಲದೆ ವಿದ್ಯುತ್ ದರ ಹೆಚ್ಚಾಗಿದೆ. ಪ್ರತಿ ಯೂನಿಟ್ ಗೆ ರೂ.2.89 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಬಳಕೆ ಶುಲ್ಕ, ಫಿಕ್ಸ್ ಚಾರ್ಜ್ ಸೇರಿದಂತೆ ಇತರೆ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿದೆ.
ಈ ಬೆನ್ನಲ್ಲೇ ಸದ್ದಿಲ್ಲದೆ ಮದ್ಯದ ದರಗಳನ್ನು ಕೂಡ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ.
ಮದ್ಯಪ್ರಿಯರಿಗೆ ಶಾಕ್ ಎನ್ನುವಂತೆ ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್ ಗಳ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಮಾಹಿತಿಯ ಪ್ರಕಾರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತ್ರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಎಣ್ಣೆ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ನಿಮ್ಮ ಕನ್ನಡ ನ್ಯೂಸ್ ನೌಗೆ ಮಾಹಿತಿ ಲಭ್ಯವಾಗಿದ್ದು, ಬಡ್ ವೈಸರ್ ಬಿಯರ್ ದರ ರೂ.198 ರಿಂದ 220ಕ್ಕೆ ಹೆಚ್ಚಳ ಮಾಡಲಾಗಿದೆ. ಕಿಂಗ್ ಫಿಶರ್ ಬಿಯರ್ ದರವನ್ನು ರೂ.160ರಿಂದ 170ಕ್ಕೆ ಏರಿಕೆ ಮಾಡಲಾಗಿದೆ. ಯುಬಿ ಪ್ರೀಮಿಯಂ ದರ ರೂ.125ರಿಂದ 135, ಸ್ಟ್ರಾಂಗ್ ದರ ರೂ.130ರಿಂದ 135ಗೆ ಹೆಚ್ಚಳ ಮಾಡಲಾಗಿದೆ.
ಇನ್ನೂ ಬಿಯರ್ ಅಷ್ಟೇ ಅಲ್ಲದೇ ಪುಲ್ ಬಾಟೆಲ್ ಹಾರ್ಡ್ ಡ್ರಿಂಕ್ಸ್ ಗಳಾದಂತ ಆಫೀಸರ್ ಚಾಯಿಸ್ ಪುಲ್ ಕ್ವಾಟರ್ ಬಾಟಲ್ ದರ ರೂ.440ರಿಂದ ರೂ.568ಕ್ಕೆ ಹೆಚ್ಚಳ ಮಾಡಿದ್ದು, ಬಿಪಿ ಬೆಲೆ ಕೂಡ 440 ರೂನಿಂದ 568ಕ್ಕೆ ಹೆಚ್ಚಳ ಮಾಡಿರುವುದಾಗಿ ತಿಳಿದು ಬಂದಿದೆ.
ಇದಷ್ಟೇ ಅಲ್ಲದೇ ಇತರೆ ಬಿಯರ್ ಸೇರಿದಂತೆ ಮದ್ಯದ ದರವನ್ನು ಪ್ರತಿ ಬಾಟಲ್ ಗೆ ರೂ.10 ರಿಂದ 20ರವರೆಗೆ ಹೆಚ್ಚಳ ಮಾಡಲಾಗಿದೆ. ಮದ್ಯಪ್ರಿಯರಿಗೆ ಎಂಎಸ್‌ಐಎಲ್ ನಲ್ಲಿ ಎಂ.ಆರ್ ಪಿ ದರದಂತೆ ಸಿಕ್ಕರೇ, ಬಾರ್, ರೆಸ್ಟೋರೆಂಟ್ ಗಳಲ್ಲಿ 10 ರಿಂದ 20 ಹೆಚ್ಚಳ ಮಾಡಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಎಣ್ಣೆಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ