ಬೆಂಗಳೂರು : ಗೃಹಜ್ಯೋತಿ ಯೋಜನೆಯಡಿ ಬಾಡಿಗೆದಾರರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
ಬಾಡಿಗೆದಾರರಿಗೂ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುತ್ತದೆ, ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಸಂಪೂರ್ಣ ದಾಖಲೆಗಳನ್ನು ನೀಡಬೇಕು.
ಮಾಲೀಕನ ಎಷ್ಟು ಬಾಡಿಗೆ ಮನೆ ಇದೆ ಎಂದು ಘೋಷಿಸಬೇಕು ಹಾಗೂ ಮನೆ ಮಾಲೀಕ ಕಡ್ಡಾಯವಾಗಿ ತೆರಿಗೆ ಕಟ್ಟಿರಬೇಕು. ಇಷ್ಟು ಬಾಡಿಗೆ ಮನೆಗಳಿದೆ, ಇಷ್ಟು ಮನೆಗಳಿಗೆ ನಾನು ಟ್ಯಾಕ್ಸ್ ಕಟ್ಟಿದ್ದೇನೆ ಎಂದು ಮಾಹಿತಿ ನೀಡಬೇಕು. ಒಂದು ವೇಳೆ ತಪ್ಪು ಮಾಹಿತಿ ನೀಡಿದ್ರೆ ಈ ಯೋಜನೆ ಅನ್ವಯವಾಗುವುದಿಲ್ಲ . ಎಷ್ಟು ವರ್ಷಗಳಿಂದ ಬಾಡಿಗೆ ಕಟ್ಟುತ್ತಿದ್ದೇವೆ. ವಿದ್ಯುತ್ ಬಿಲ್, ಮನೆ ಬಾಡಿಗೆ, ಕರಾರು ಪತ್ರವಿರಬೇಕು. ಎಷ್ಟು ಮನೆ ಇದೆ ಎಂದು ಘೋಷಿಸಿರಬೇಕು. ಬಾಡಿಗೆಗಾರರಿಗೆ ಉಚಿತ ವಿದ್ಯುತ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ನಾಲ್ಕು ಗ್ಯಾರಂಟಿಗಳಿಗೆ ಅಧಿಕೃತ ಆದೇಶವನ್ನು ಕೂಡ ಹೊರಡಿಸಿದೆ. ಹೀಗೆ ಹೊರಡಿಸಿದಂತ ಅಧಿಕೃತ ಆದೇಶದ ಮಾರ್ಗಸೂಚಿಯಲ್ಲಿ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಶಕ್ತಿ ಯೋಜನೆ ಗ್ಯಾರಂಟಿ ಜಾರಿಗೂ ಮುನ್ನ ಹಾಗೂ ತಾತ್ವಿಕ ಒಪ್ಪಿಗೆಯನ್ನು ಸಚಿವ ಸಂಪುಟ ಸಭೆಯಲ್ಲಿ ನೀಡಿದ ನಂತ್ರ, ಜೂನ್ 2ರಂದು ನಡೆದಿದ್ದಂತ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಿದ್ದಂತ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೂಡ ನೀಡಲಾಗಿತ್ತು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಂತ ಸಿಎಂ, ಮನೆ ಮಾಲೀಕರು ಸೇರಿದಂತೆ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದರು.
ಪ್ರಯೋಜನವನ್ನು ಪಡೆಯಲು ಬಯಸುವ ಗ್ರಾಹಕರು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. 2022-2023ರ ಹಣಕಾಸು ವರ್ಷದಲ್ಲಿ 12 ತಿಂಗಳ ಸರಾಸರಿ ಬಳಕೆ ಮತ್ತು ಶೇಕಡಾ 10ರಷ್ಟು ಹೆಚ್ಚಿನ ವಿದ್ಯುತ್ ಬಳಕೆ 200 ಯೂನಿಟ್ಗಳನ್ನು ಮೀರದಿದ್ದರೆ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. 200 ಯೂನಿಟ್ ದಾಟಿದ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ.