ಬೆಂಗಳೂರು: ಕೆಎಂಎಫ್ ನಿಂದ ಹಾಲು ಉತ್ಪಾದರಿಗೆ ಹಾಲಿನ ಶೇಖರಣೆ ದರವನ್ನು ಪ್ರತಿ ಲೀಟರ್ ಗೆ ರೂ.1.50ಗಳನ್ನು ಕಡಿಮೆ ಮಾಡಲಾಗಿತ್ತು. ಈಗ ಈ ಆದೇಶವನ್ನು ಹಿಂಪಡೆದಿದ್ದು, ಹಿಂದಿನಂತೆ ಮುಂದುವರೆಸುವ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತಂತೆ ಕರ್ನಾಟಕ ಸಹಕಾರ ಹಾಲು ಉತ್ಪದಕ ಮಹಾಮಂಡಳ ನಿಯಮಿತದ ವ್ಯವಸ್ಥಾಪಕ ನಿರ್ದೇಶದರು ನಿರ್ದೇಶವನ್ನು ನೀಡಿದ್ದಾರೆ. ಅದರಲ್ಲಿ ದಿನಾಂಕ 30-05-2023ರಿಂದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಹಾಲು ಉತ್ಪಾದಕರಿಗೆ ದಿನಾಂಕ 01-06-2023ರಿಂದ ಅನ್ವಯವಾಗುವಂತೆ ಹಾಲಿನ ಶೇಖರಣೆ ದರವನ್ನು ಪ್ರತಿ ಲೀಟರ್ ಗೆ ರೂ.1.50ಗಳನ್ನು ಕಡಿಮೆ ಮಾಡಲಾಗಿತ್ತು ಎಂದಿದ್ದಾರೆ.
ಈ ಬಗ್ಗೆ ಸರ್ಕಾರವು ಗಮನಿಸಿದ್ದು, ಹಾಲು ಉತ್ಪಾದಕರ ಹಿತದೃಷ್ಠಿಯಿಂದ ದರವನ್ನು ಈ ಹಿಂದಿನಂತೆ ಮುಂದುವರೆಸಲು ಮುಖ್ಯಮಂತ್ರಿಗಳು ನಿರ್ದೇಶಿಸಿರುತ್ತಾರೆ ಎಂದು ಹೇಳಿದ್ದಾರೆ.
ಸಿಎಂ ನಿರ್ದೇಶನದ ಮೇರೆಗೆ ಹೈನುಗಾರ ರೈತರ ಹಿತದೃಷ್ಠಿಯಿಂದ ಇಂದೇ ಪ್ರತಿ ಲೀಟರ್ ಗೆ ರೂ.1.50ಗಳನ್ನು ಕಡಿಮೆ ಮಾಡಿರುವ ಆದೇಶವನ್ನು ಹಿಂಪಡೆದು, ಪ್ರತಿ ಲೀಟರ್ ಗೆ ಹಿಂದಿನ ದರದಂತೆ ರೂ.34ಗಳನ್ನು ನಿಗದಿಪಡಿಸಿ ವರದಿಸಲು ಸೂಚಿಸಿದ್ದಾರೆ.